ಬೆಂಗಳೂರು: ಟಿಕೆಟ್ ಪಡೆದ ನಿಲ್ದಾಣ ಬರುವ ಮೊದಲೇ ಯುವತಿ ಬಸ್ ಇಳಿಯಲು ಮುಂದಾಗಿದ್ದು, ಯುವತಿ ಹಾಗೂ ಕಂಡಕ್ಟರ್ (Conductor) ನಡುವೆ ಗಲಾಟೆ ನಡೆದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಾಗಿನಿಂದ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವಿನ ಜಟಾಪಟಿ ದಿನೇ ದಿನೇ ಹೆಚ್ಚುತ್ತಿದೆ.
ಪ್ರಯಾಣಿಕರು ನಿಗದಿತ ಸ್ಥಳಕ್ಕೆ ಟಿಕೆಟ್ ಪಡೆದು ಸ್ಟಾಪ್ ಬರುವ ಮುನ್ನವೇ ಬಸ್ಸಿನಿಂದ ಇಳಿಯುತ್ತಿರುವ ಘಟನೆಗಳು ಹೆಚ್ಚಿದ್ದು, ಮಹಿಳಾ ಪ್ರಯಾಣಿಕರ ಈ ನಡೆಗೆ ನಿರ್ವಾಹಕರು ಸುಸ್ತಾಗಿದ್ದಾರೆ. ಅಲ್ಲದೇ ಮಹಿಳೆಯರ ನಡೆಯಿಂದ ನಿರ್ವಾಹಕರು ಈಗ ಇಕ್ಕಟ್ಟಿಗೆ ಸಿಲುಕುವಂತಾಗಿದೆ.