ಕಂಪ್ಲಿ:– ತಾಲೂಕು ಚಿಕ್ಕಜಾಹೀನೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಲಿಂಗತ್ವದ ತರಬೇತಿಯನ್ನು ರೀಡ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ತರಬೇತಿಯಲ್ಲಿ ಒಟ್ಟು –44 ವಿದ್ಯಾರ್ಥಿಗಳು ಮತ್ತು ರೀಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕರು ಸಂಪನ್ಮೂಲ ವ್ಯಕ್ತಿಯಾಗಿ ಪ್ರವೀಣ ರವರು ನಡೆಸಿಕೊಟ್ಟರು, ತಾಲೂಕು ಸಂಯೋಜಕರು ನಾಗರಾಜ್ ರವರು ನಿರೂಪಣೆ ಮಾಡಿದರು. ಶಾಲೆಯ ಮುಕ್ಯೋಪಾಧ್ಯಾಯರು ಭಾಗವಹಿಸಿದ್ದರು.
ನಾವು ಚಿಕ್ಕ ವಯಸ್ಸಿನಿಂದಲೇ ಹೆಣ್ಣು ಮತ್ತು ಗಂಡು ಎಂಬ ಭೇದಭಾವ ಬಿತ್ತುತ್ತಾ ಸಮಾಜದಲ್ಲಿ ಲಿಂಗ
ಅಸಮಾನತೆಗೆ ಕಾರಣೀಭೂತರಾಗಿದ್ದೇವೆ. ಆಧುನಿಕ ಯುಗದಲ್ಲೂ ಮೌಡ್ಯತೆಯನ್ನು ಮೆರೆಯುತ್ತಿದ್ದೇವೆ. ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ಯಾವುದೇ ಕ್ಷೇತ್ರದಲ್ಲೂ ಸುಸ್ಥಿರ ಅಭಿವೃದ್ಧಿಯನ್ನು ನಿರೀಕ್ಷೆ ಮಾಡಲು ಸಾದ್ಯವಿಲ್ಲ. ಸಮಾಜದಲ್ಲಿರುವ ಲಿಂಗ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಇಂತಹ ತರಬೇತಿ
ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿದೆ ಎಂದರು.
ನೂರಾರು ವರ್ಷಗಳಿಂದ ಬಂದಿರುವ ಅವೈಜ್ಞಾನಿಕ ರೂಢಿಬದ್ದ ಸಂಪ್ರದಾಯಗಳನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಕಾರ್ಯಪ್ರವೃತ್ತರಾಗಬೇಕು. ತಾಯಿಯ ಗರ್ಭದಲ್ಲಿರುವ ಮಗುವಿನ ಆರೋಗ್ಯ ಮತ್ತು ಆರೈಕೆಯಿಂದ ಹಿಡಿದು ವೃದ್ಯಾಪ್ಯದವರೆಗೂ ಮತ್ತು ಆ ನಂತರವೂ ಕೂಡ ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ತುಂಬಾ ಮಹತ್ತರವಾಗಿದೆ.
ಬಳ್ಳಾರಿ ರೇಡ್ ಸಂಸ್ಥೆ ಪ್ರಾಜೆಕ್ಟ್ ಮ್ಯಾನೇಜರ್ ಪ್ರವೀಣ್ ಕುಮಾರ್ ಅವರು ಮಾತನಾಡಿ, ಮೂಢನಂಬಿಕೆ ಮತ್ತು ಮೌಡ್ಯತೆಗಳಿಂದ ಹಲವಾರು ವರ್ಷಗಳಿಂದ ಮಹಿಳೆಯರ ಮೇಲೆ ಹಾಕಿರುವ ಸಂಕೋಲೆ ಬಿಡಿಸಿಕೊಳ್ಳಲು ಮಹಿಳೆಯರೇ ಸದೃಢರಾಗಿ ಸಬಲರಾಗಬೇಕು ಮತ್ತು ಪುರಷರು ಇದಕ್ಕೆ ಸಹಕಾರವನ್ನು ಕೋಡಬೇಕು ವಿವರಿಸಿದರು.
ಲಿಂಗ ಮತ್ತು ಲಿಂಗತ್ವದ ಕುರಿತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ತರಬೇತಿಯನ್ನು, ಅರಿವನ್ನು ಮೂಡಿಸಿದರು. ಈ ಸಂದರ್ಭದಲ್ಲಿ ಕೌಶಲ್ಯ ಮುಖ್ಯ ಗುರುಗಳು ಶಿಕ್ಷಕ ಶಿಕ್ಷಕರು ಆ ಶಾಲೆ ಎಲ್ಲಾ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು