ತುಮಕೂರು:- ಜಿಲ್ಲೆಯಲ್ಲಿ ಪಾಪಿ ತಂದೆಯಿಂದಲೇ ಮಗಳ ಮೇಲೆ ಪೈಶಾಚಿಕ ಕೃತ್ಯ ನಡೆದಿದೆ. ಹೆತ್ತ ಮಗಳ ಮೇಲೆಯೇ ಕಾಮುಕ ತಂದೆ ಆತ್ಯಚಾರ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಪ್ಪೆತೋಪು ಬಡವಾಣೆಯಲ್ಲಿ ಜರುಗಿದೆ.
13ವರ್ಷದ ಅಪ್ರಾಪ್ತೆ ಮಗಳ ಮೇಲೆ ಆತ್ಯಾಚಾರ ನಡೆಸಿ ತಂದೆ ಪರಾರಿಯಾಗಿದ್ದಾನೆ. ಈ ಹಿಂದೆಯೂ ಒಮ್ಮೆ ಮಗಳ ಮೇಲೆ ಆತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಘಟನೆ ಕುರಿತು ತಾಯಿಯಿಂದ ತಿಪಟೂರು ನಗರ ಠಾಣೆಗೆ ದೂರು ನೀಡಲಾಗಿದೆ. ತಾಯಿಯ ದೂರಿನ ಅನ್ವಯ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಕೊಂಡಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪತ್ತೆಗಾಗಿ ತಿಪಟೂರು ನಗರ ಪೊಲೀಸರಿಂದ ಕಾರ್ಯಚರಣೆ ಮುಂದುವರಿದಿದೆ.