ಬೆಂಗಳೂರು: ಯಲಹಂಕದ ಆಲೂರು ಪಂಚಾಯತಿ ವ್ಯಾಪ್ತಿಯ ಬಿಡಿಎ ಅಪಾರ್ಟ್ಮೆಂಟ್ ನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್, ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಭೂಮಿಪೂಜೆ ನೆರವೇರಿಸಿದರು. ನಂತರ ಕ್ಷೇತ್ರದ ನಿವಾಸಿಗಳ ಮತ್ತಷ್ಟು ಅಹವಾಲುಗಳನ್ನು ಸ್ವೀಕರಿಸಲಾಯಿತು.
ಮತ್ತು ನಿವಾಸಿಗಳಿಗೆ ಪ್ರತ್ಯೇಕ ಜಿಮ್ ತೆರೆಯಲು 50 ಲಕ್ಷ ರೂಪಾಯಿಯನ್ನು ಸ್ಥಳದಲ್ಲೇ ಅನುಮೋದನೆ ನೀಡಿದರು. ನಂತರ ಮಾತನಾಡಿದ ಅವರು ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಪ್ರಾರಂಭವಾಗಿದ್ದು, ಪ್ರಗತಿಯತ್ತ ಸಾಗಲಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
