ತುಮಕೂರು : ತುಮಕೂರಿನಲ್ಲಿ ಡೆಂಘೀಗೆ ಏಳು ವರ್ಷದ ಬಾಲಕನೊಬ್ಬ ಡೆಂಗ್ಯೂಗೆ ಬಾಲಕ ಬಲಿಯಾಗಿದ್ದಾನೆ. ಪಾವಗಡ ಪಟ್ಟಣದ ಬಾಬೈಯ್ಯನ ಗುಡಿ ಬೀದಿಯ ಕರುಣಾಕರ್(7) ಸಾವನ್ನಪ್ಪಿದ್ದಾನೆ. ಹರೀಶ್ ಕುಮಾರ್ ಎನ್ನುವವರ ಪುತ್ರ ಕರುಣಾಕರ ಕಳೆದ 8 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಇನ್ನೂ ಬಾಲಕ ಸಾಯುವವರೆಗೂ ಸಹ ವೈದ್ಯರು ಆತನಿಗೆ ಡೆಂಘೀ ಜ್ವರ ಇರುವ ಇರುವ ವಿಚಾರವನ್ನು ತಿಳಿಸಲೇ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಖಂಡಿಸಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.