ಮಂಗಳೂರು:– ತುಳು ಅಧಿಕೃತ ಭಾಷೆಯಾಗಿಸಲು ಗಂಭೀರ ಪ್ರಯತ್ನ ಮಾಡಲಾಗುತ್ತದೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ತುಳು ಭಾಷೆಯನ್ನು ಎರಡನೇ ಭಾಷೆ ಮಾಡಬೇಕು ಎಂಬ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಕಂಬಳ ಬಹಳ ಪುರಾತನವಾದ ಗ್ರಾಮೀಣ ಕ್ರೀಡೆಯಾಗಿದೆ. ಇದು ಬಹಳ ಜನಪ್ರಿಯವಾಗಿದೆ ಎಂಬುದು ಇಲ್ಲಿ ಸೇರಿದ ಜನರನ್ನು ನೋಡಿದಾಗಲೇ ಗೊತ್ತಾಗುತ್ತದೆ. ಸುಪ್ರೀಂ ಕೋರ್ಟ್ ಕಂಬಳವನ್ನು ನಿಷೇಧ ಮಾಡಿತ್ತು. ಆದರೆ, ನಮ್ಮ ಸರ್ಕಾರ ಆ ನಿಷೇಧವನ್ನು ತೆರವುಗೊಳಿಸಿ ಮತ್ತೊಮ್ಮೆ ಕಂಬಳ ಕ್ರೀಡೆ ನಡೆಸಲು ನೆರವಾಗಿದೆ ಎಂದಿದ್ದಾರೆ.
ಕೋಣ ಸಾಕಿದ ಹಾಗೆ ಮಗನನ್ನು ಸಾಕಲು ಸಾಧ್ಯವಿಲ್ಲ. ಕಂಬಳವನ್ನು ಬೆಳಸಬೇಕು, ಸಂಪ್ರದಾಯವಾದ ಈ ಕ್ರೀಡೆಯನ್ನು ಉಳಿಸಬೇಕು. ತುಳುನಾಡಿನ ಜನ ಕಂಬಳ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ವಿದ್ಯಾವಂತರೂ ಭಾಗವಹಿಸುತ್ತಿದ್ದಾರೆ. ಇದೇ ಕಾರಣದಿಂದ ಕಂಬಳವನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.