ಬೆಂಗಳೂರು:- ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ: ಶೋಭಾ ಕರಂದ್ಲಾಜೆ!
ಆಯಾ ಕಂಪನಿಗಳಿಂದಲೂ ಪರಿಹಾರ ಕೊಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ನಾಲ್ಕು ಮಂದಿ ಬಾಣಂತಿಯರು ಸಾವನ್ನಪ್ಪಿದ್ದರು. ನಾವು ಎಕ್ಸ್ಪರ್ಟ್ ಕಮಿಟಿ ಮಾಡಿದ್ದೆವು. ರಾಜೀವ್, ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗಳ ಕಮಿಟಿ ಮಾಡಿದ್ದೆವು. ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಯಾಗಿದೆ. ಅದನ್ನ ಸರಬರಾಜು ಮಾಡಿದ್ದವರು ಪಶ್ಚಿಮ ಬಂಗಾಳ ಫಾರ್ಮಾಸುಟಿಕಲ್ಸ್ನವರು. ಅದನ್ನ ಡ್ರಗ್ ಕಂಟ್ರೋಲರ್ ಸರಬರಾಜು ಮಾಡ್ತಾರೆ. ಕೂಡಲೇ ಡ್ರಗ್ಸ್ ಕಂಟ್ರೋಲರ್ ಸಸ್ಪೆಂಡ್ಗೆ ಸೂಚನೆ ನೀಡಿದ್ದೇನೆ. ಪಶ್ಚಿಮ ಬಂಗಾಳದ ಫಾರ್ಮಾಸುಟಿಕಲ್ಸ್ ಕಂಪನಿ ಬ್ಲಾಕ್ಲಿಸ್ಟ್ಗೆ ಸೇರಿಸುವಂತೆ ಹೇಳಿದ್ದೇನೆ ಎಂದರು
ಸಾವನ್ನಪ್ಪಿದ್ದವರಿಗೆ ಪರಿಹಾರ ಕೊಡ್ತೇವೆ. ತಲಾ 2 ಲಕ್ಷ ಪರಿಹಾರ ಕೊಡ್ತೇವೆ. ಆ ಕಂಪನಿಗಳಿಂದಲೂ ಪರಿಹಾರ ಕೊಡಿಸ್ತೇವೆ. ಕರ್ನಾಟಕ ಮೆಡಿಕಲ್ ಸಪ್ಲೈಗೆ ನವರಿಗೆ ನೋಟಿಸ್ ಕೊಡೋಕೆ ಹೇಳಿದ್ದೇನೆ. 192 ಕಂಪನಿಗಳು ಸಪ್ಲೈ ಮಾಡುತ್ತವೆ. ಡ್ರಗ್ಸ್ ಕಂಟ್ರೋಲ್ ಬೋರ್ಡ್ ಆಡಳಿತ ಬದಲಾವಣೆ ಮಾಡುವಂತೆ ಹೇಳಿದ್ದೇನೆ. ಒಂದು ಕಮಿಟಿಯನ್ನ ರಚನೆ ಮಾಡ್ತೇವೆ. ಬಳ್ಳಾರಿ ಜಿಲ್ಲಾ ಸರ್ಜನ್ಗೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಹೇಳಿದರು