ಚಾಮರಾಜನಗರ : ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಚ ಸಿ.ಎಸ್.ನಿರಂಜನಕುಮಾರ್ ತಂದೆ ಬಿಜೆಪಿ ಮುಖಂಡ ಚೌಡಳ್ಳಿ ಸಿ.ಎಂ.ಶಿವಮಲ್ಲಪ್ಪ(84) ವಿಧಿವಶರಾಗಿದ್ದಾರೆ.
ಮಾಜಿ ಶಾಸಕ ದಿವಂಗತ ಹೆಚ್.ಕೆ. ಶಿವರುದ್ರಪ್ಪರವರ ಒಡನಾಡಿಯಾಗಿದ್ದ ಸಿ.ಎಂ.ಶಿವಮಲ್ಲಪ್ಪ ಇಂದು ಮುಂಜಾನೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಮಾಜಿ ಶಾಸಕ ನಿರಂಜನಕುಮಾರ್ ಹಾಗೂ ಐವರು ಪುತ್ರಿಯರು ಸೇರಿದಂತೆ 6 ಮಕ್ಕಳು ಇದ್ದಾರೆ.
ರಾಮನಗರ ಜಿಲ್ಲೆಯ ಹೆಸರನ್ನು ನಾವು ಬದಲಾವಣೆ ಮಾಡುತ್ತೇವೆ: ಡಿಕೆ ಶಿವಕುಮಾರ್
ಸಿ.ಎಂ.ಶಿವಮಲ್ಲಪ್ಪರವರು 1941 ರಲ್ಲಿ ಚೌಡಳ್ಳಿ ಗ್ರಾಮದಲ್ಲಿ ಜನಿಸಿದ್ರು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ವೃತ್ತಿ ಪ್ರಾರಂಭಿಸಿ ಮೂರು ಬಾರಿ ಪಿ.ಎಲ್.ಡಿ.ಬ್ಯಾಂಕ್, ಹಾಗೂ ಒಂದು ಬಾರಿ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಲು ಸೇವೆ ಸಲ್ಲಿಸಿ ಸುದೀರ್ಘವಾಗಿ 40 ವರ್ಷಗಳ ಕಾಲ ರಾಜಕಾರಣದಲ್ಲಿ ತೊಡಗಿಕೊಂಡಿದ್ದರು. 1956 ಕಬ್ಬಳ್ಳಿಯಲ್ಲಿ ಹೈಸ್ಕೂಲಿನಲ್ಲಿ 1959 ರವರೆಗೆ ಚಾಮರಾಜನಗರದಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಚೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಚಿಯಾಗಿದ್ರು ಟಿಕೆಟ್ ಸಿಗದ ಕಾರಣ ಸ್ಚತಂತ್ರ ಸ್ಪರ್ಧಿಯಾಗಿ 1994 ಹಾಗೂ 1999ರಲ್ಲಿ ಪರಾಭವಗೊಂಡರು. ಮೈಸೂರು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಚರಾಗಿದ್ರು. ಮಾಜಿ ಶಾಸಕ ಹೆಚ್.ಕೆ.ಶಿವರುದ್ರಪ್ಪರ ಒಡನಾಡಿಯಾಗಿದ್ರು. ಹಾಗೂ ಮಾಜಿ ಸಚಿವ ಹೆಚ್ಎಸ.ಮಹದೇವಪ್ರಸಾದ್ ರವರ ತಂದೆ ಶ್ರೀಕಂಠಶೆಟ್ಟರ ಜೊತೆಯಲ್ಲೂ ಕೂಡ ಆತ್ಮೀಯರಾಗಿದ್ರು. ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಕೆರೆ, ಕಲ್ಟಟ್ಟ , ಯರಗನಹಳ್ಳಿ ಬಳಿಯ ಸುವರ್ಣಾವತಿ ಕೆರೆ ಸೇರಿದಂತೆ ಜಲಾಶಯ ಹಾಗೂ ಕೆರೆ ಕಟ್ಟೆಗಳು ಸುಸಜ್ಜಿತ ರಸ್ತೆಗಳ ನಿರ್ಮಾಣಕ್ಕೆ ಕಾರಣೀಭೂತರಾದವರು ಶಿವಮಲ್ಲಪ್ಪನವರು. ಗುಂಡ್ಲುಪೇಟೆ ತಾಲೂಕಿನ ಹಲವು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವಲ್ಲಿ ಯಶಸ್ವಿಯಾಗಿದ್ರು. ನಂತರ ಬದಲಾದ ರಾಜಕೀಯ ಸನ್ನೀವೇಶದಲ್ಲಿ ಮಗನ ಭವಿಷ್ಯಕ್ಕಾಗಿ ಬಿ.ಎಸ.ಯಡಿಯೂರಪ್ಪರ ಕರೆಗೆ ಮೇರೆಗೆ 2008 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.