ಮಂಡ್ಯ;- ಮೂರು ಡಿಸಿಎಂ ಹುದ್ದೆಯ ಬೇಡಿಕೆ ವರಿಷ್ಠರ ತೀರ್ಮಾನ ಎಂದು ಮಂಡ್ಯದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈ ವಿಚಾರವನ್ನು ಹೈಕಮಾಂಡ್ಗೆ ಬಿಟ್ಟು ಬಿಡೋಣ. ಅದನ್ನು ಅವರೇ ಕೇಳಬೇಕು. ನಾನು ಹೈಕಮಾಂಡ್ ಗಮನಕ್ಕೆ ಈ ವಿಷಯವನ್ನು ತರುವುದಕ್ಕೆ ಆಗಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ ತಪ್ಪಲ್ಲ ಎಂದು ಹೇಳಿದರು. ಕಾವೇರಿ ನಿರ್ವಾಹಣಾ ಪ್ರಾಧಿಕಾರದ ಸಭೆ ಬಗ್ಗೆ ಮಾತನಾಡುತ್ತಾ, ಇಂದು ಏನು ತೀರ್ಪು ಬರುತ್ತದೆ ಎಂದು ಕಾದು ನೋಡೋಣ. ತೀರ್ಪು ನಮ್ಮ ಪರವಾಗಿ ಬರಬೇಕೆಂಬುದು ನಮ್ಮ ಆಸೆ. ಅದಕ್ಕೆ ತಕ್ಕಂತೆ ಎಲ್ಲಾ ವಿಷಯಗಳನ್ನೂ ತಿಳಿಸಿದ್ದೇವೆ ಎಂದು ತಿಳಿಸಿದರು.

ನಾಡಿನ ಜನತೆಗೆ ನನ್ನ ಹಾಗೂ ಸರ್ಕಾರದ ಪರವಾಗಿ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಈ ಬಾರಿ ಮಳೆ ಅಭಾವದಿಂದ ಬಹಳಷ್ಟು ಸಂಕಷ್ಟಗಳು ಎದುರಾಗಿವೆ. ಗಣಪತಿ ಆ ಎಲ್ಲಾ ಸಂಕಷ್ಟಗಳನ್ನು ನಿವಾರಣೆ ಮಾಡ್ತಾನೆ ಅನ್ನೋ ವಿಶ್ವಾಸವಿದೆ. ಸಂಕಷ್ಟ ದೂರ ಮಾಡಲೆಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.
