ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಚಾರ ‘ನನಗೆ ಆ ಜವಾಬ್ದಾರಿ ಕೊಟ್ಟರೆ ಸಂತೋಷ ಎಂದು ಬೆಂಗಳೂರಿನಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
‘ಕೊಡುವ ಸ್ಥಾನಕ್ಕೆ ಗೌರವ ಸಲ್ಲಿಸುವೆ, ಬೇರೆ ಯಾರಿಗೆ ಕೊಟ್ಟರೂ ಅವರೊಂದಿಗೆ ಸಹಕರಿಸಿಕೊಂಡು ಹೋಗುತ್ತೇವೆ. ನಮಗೆ ಪಕ್ಷ, ಸಿದ್ದಾಂತ ಮುಖ್ಯ. ಇಂದು ಸಂಜೆಯೇ ವಿಪಕ್ಷ ನಾಯಕರ ಆಯ್ಕೆ ಆಗಬಹುದು. ಅದಕ್ಕೂ ಮೊದಲು ಅವರು ಪ್ರಮುಖ ನಾಯಕರನ್ನು ಭೇಟಿಯಾಗಿ ವೈಯುಕ್ತಿಕ ಅಭಿಪ್ರಾಯ ಪಡೆಯುತ್ತಿದ್ದಾರೆ ಎಂದರು.