ಬೆಂಗಳೂರು: ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಲಂಡನ್ ಗೆ ಭೇಟಿ ನೀಡಿದ ವೇಳೆ ಥೇಮ್ಸ್ ನದಿ ಪಕ್ಕದಲ್ಲಿರುವ ಕಾಯಕ ಯೋಗಿ ಬಸವಣ್ಣ ಅವರ ಮೂರ್ತಿಯನ್ನು ವೀಕ್ಷಿಸಿದರು.
ಇದೊಂದು ನನ್ನ ಅಪೂರ್ವ ಕ್ಷಣಗಳಲ್ಲೊಂದು.ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಹೋಗಲಾಡಿಸುವ ಹೋರಾಟದಲ್ಲಿ ಬಸವಣ್ಣ ಅವರ ಕೊಡುಗೆ ಅಪಾರ.ಅವರ ತತ್ವದರ್ಶ ಲಂಡನ್ ಅಲ್ಲೂ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಹಾಗೆ ಅವರು ಬಸವಣ್ಣನವರ ಪುತ್ಥಳಿಯನ್ನು ಕಂಡು ಒಂದು ಕ್ಷಣ ಕಣ್ಣಲ್ಲಿ ಕಣ್ಣೀರು ಸಹ ಬಂತು ಅಂದರು ಯಾಕೆಂದರೆ ತೆರೆದ ಸ್ಥಳದಲ್ಲಿ ಬಸವಣ್ಣನ ಪುತ್ಥಳಿಯನ್ನು ನೋಡಿ ಮನಸ್ಸಿಗೆ ಅದೇನೋ ನೋವಾಯಿತು ಎಂದು ಭಾವುಕರಾದರು
ಆ ನಂತರ ಅನುಭವ ಮಂಟಪದ ತರಹ ಗೋಪುರ ಕಟ್ಟಬೇಕು, ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅದು ಇನ್ನೂ ರೋಮಾಂಚನಕರ ಅನುಭವವನ್ನು ನೀಡುತ್ತದೆ ಎಂದನ್ನಿಸಿತು ಎಂದರು.
ಮುಂದೆ ಬಸವಣ್ಣನವರ ವಚನವನ್ನು ಸಹ ಉಲ್ಲೇಖಿಸಿ ಒಂದು ಂಆತನ್ನು ಹೇಳಿದರು, ಏನಂದರೆ ಕಲ್ಲನಾಗರ ಕಂಡರೆ ಪಾಲನೆರೆಯೆಂಬರು, ದಿಟದ ನಾಗ ಕಂಡಡೆ ಕೊಲ್ಲೆಂಬರಯ್ಯಾ ಎನ್ನುವ ಮೂಲಕ ಸಮಾಜದ ಡೊಂಕನ್ನು ಎತ್ತಿಹೇಳಿದ ಧೀಮಂತ ನಾಯಕರಾದ ಬಸವಣ್ಣ ಅವರ ಪುತ್ಥಳಿಗೆ ಗೋಪುರ ಕಟ್ಟುವಲ್ಲಿ ನಮ್ಮ ಸರ್ಕಾರ ಹಾಗು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ನನ್ನ ಕೈಲಾದ ಪ್ರಯತ್ನ ನಾನು ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.
