ನಟ ದರ್ಶನ್ ಜೊತೆ ಸುದ್ದಿಯಾಗ್ತಿರೋ ಪವಿತ್ರಾ ಗೌಡರನ್ನು ನೋಡಿದ್ರೆ ಯಾರಾದ್ರು ಈಕೆ ಸೌಂದರ್ಯವತಿ ಅಂತ ಹೇಳದೆ ಇರಲಾರರು. ನಿಜವಾಗಿಯೂ ಪವಿತ್ರಾ ಗೌಡ ಸುರ ಸುಂದರಿಯೇ. ಆದರೆ ಈಕೆ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಸಂದರ್ಭದಲ್ಲಿ ಹೀಗೆ ಇರಲೇ ಇಲ್ಲ.
ನಟಿ ಹಾಗೂ ದರ್ಶನ್ ಗೆಳತಿ ಪವಿತ್ರಾ ಗೌಡ ಸಖತ್ ಸುದ್ದಿಯಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಎ1 ಆರೋಪಿ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ದರ್ಶನ್ ಕೂಡ ಈ ಪ್ರಕರಣದಲ್ಲಿ ಸಿಲುಕಿದ್ದಾರೆ.
ಇಂದು ಗ್ಲಾಮರ್ ಗೊಂಬೆ ಆಗಿರೋ ಪವಿತ್ರಾ ಮೊದಲು ಈ ರೀತಿ ಇರಲಿಲ್ಲ. ಅವರು ನಟಿಸಿದ ಮೊದಲ ಸಿನಿಮಾ ‘ಅಗಮ್ಯ’. ಹಾರರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿತ್ತು ಈ ಚಿತ್ರದ ಮೂಲಕ ಪವಿತ್ರಾ ಗೌಡ ವೃತ್ತಿ ಜೀವನ ಆರಂಭಿಸಿದರು.
ನಿರ್ದೇಶಕ ಉಮೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದ ಸೆಟ್ನಲ್ಲಿ ಪವಿತ್ರಾ ಗೌಡ ಹೇಗೆ ಕಾಣಿಸುತ್ತಿದ್ದರು ಎನ್ನುವ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪವಿತ್ರಾ ಆಗ ಸಖತ್ ಡಿ ಗ್ಲಾಮ್ ಆಗಿದ್ದರು. ನಂತರ ಅವರು ಸಂಪೂರ್ಣವಾಗಿ ಲುಕ್ ಬದಲಾಯಿತು. ಇದಕ್ಕೆಲ್ಲ ದರ್ಶನ್ ಅವರ ಗೆಳೆತನ ಹಾಗೂ ಅವರು ನೀಡುತ್ತಿದ್ದ ಕೋಟಿ ಕೋಟಿ ಹಣವೇ ಕಾರಣ ಎನ್ನಲಾಗುತ್ತಿದೆ.
ಪವಿತ್ರಾ ಚಿತ್ರರಂಗಕ್ಕೆ ಎಂಟ್ರಿಕೊಡುವ ಮುನ್ನವೇ ತಾಯಿಯಾಗಿದ್ದರು.ತಾಯಿಯಾದ ಬಳಿಕ ದಪ್ಪಗಿದ್ದ ಪವಿತ್ರಾ ಫಿಟ್ ನೆಸ್ ಕಾಯ್ದುಕೊಳ್ಳಲು ಹೋಗಿ ಸಿನಿಮಾ ಇಂಡಸ್ಟ್ರಿಯತ್ತ ಆಕರ್ಷಿತರಾದರು.
2011ರಲ್ಲಿ ಅಗಮ್ಯ ಸಿನಿಮಾ ಆರಂಭವಾಯಿತು. ಇದಕ್ಕೂ ಮುನ್ನ ಪವಿತ್ರಾಗೆ ಸಿನಿಮಾ ರಂಗದ ಮೇಲೆ ಆಸಕ್ತಿಯೇ ಇರಲಿಲ್ಲ.
ಮಿನಿ ಕೂಪರ್ ಕಾರ್ನಲ್ಲಿ ಶೂಟಿಂಗ್ ಪವಿತ್ರಾ ಬರುತ್ತಿದ್ದರು. ಕೋಣನಕುಂಟೆ ಕ್ರಾಸ್ನಲ್ಲಿ ಪವಿತ್ರಾ ಬಾಡಿಗೆ ಮನೆಯಲ್ಲಿದ್ದರು. ಆ ಬಳಿಕ ದರ್ಶನ್ ಜೊತೆ ಆಪ್ತತೆ ಬೆಳೆದ ಬಳಿಕ ಅವರೇ ಮನೆ ಹಾಗೂ ಕಾರನ್ನು ಕೊಡಿಸಿದ್ದರು.
‘ಅಗಮ್ಯ’ ಸಿನಿಮಾಗೆ ಪವಿತ್ರಾ ಗೌಡ ಪಡೆದುಕೊಂಡಿದ್ದು ಇಪ್ಪತ್ತು ಸಾವಿರ ಸಂಭಾವನೆ.
‘ಅಗಮ್ಯ’ ಸಿನಿಮಾಗೆ ನಟಿಯಾಗಿ ಪವಿತ್ರಾ ಅವರನ್ನು ಆಯ್ಕೆ ಮಾಡೋ ಉದ್ದೇಶ ಇರಲಿಲ್ಲ. ಆಕೆಗೆ ನಟನೆಯ ಗಂಧ ಗಾಳಿ ತಿಳಿದಿಲ್ಲ. ನಮ್ಮದು ಚಿಕ್ಕ ಬಜೆಟ್ ಸಿನಿಮಾ, ಬೇರೆ ಯಾವ ನಟಿಯರ ಡೇಟ್ಸ್, ಸಂಭಾವನೆ ಮ್ಯಾಚ್ ಆಗಿಲ್ಲ ಅಂತ ಪವಿತ್ರಾನ ಓಕೆ ಮಾಡಿದ್ವಿ ಎಂದು ನಿರ್ದೇಶಕ ಉಮೇಶ್ ಹೇಳಿದ್ದಾರೆ.