ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಬೀಳೋದು ಪಕ್ಕಾನಾ ಗ್ಯಾರಂಟಿ ಯೋಜನೆ ಕುರಿತು ಕಾಂಗ್ರೆಸ್ನಲ್ಲೇ ಶುರುವಾಗಿದೆ ಅಸಮಾಧಾನ ಗ್ಯಾರಂಟಿ ಬದಲಾವಣೆಗಾಗಿ ಸಚಿವರಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಬಳಿ ಅಸಮಾಧಾನ ತೋಡಿಕೊಂಡ ಸಚಿವರು ಗ್ಯಾರಂಟಿಯ ಸಾಧಕ-ಬಾಧಕ, ಲೋಪದೋಷಗಳ ಬಗ್ಗೆ ಸುರ್ಜೇವಾಲಾಗೆ ಮಾಹಿತಿ ನೀಡಲಾಗಿದೆ.
BPL ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಅಕ್ಕಿ ಬದಲು ಹಣವಲ್ಲ, ಇನ್ನು ಸಿಗಲಿದೆ ಎಣ್ಣೆ, ಬೇಳೆ, ಸಕ್ಕರೆ
ಹೌದು… ಗ್ಯಾರಂಟಿ ಯೋಜನೆಗೆ ಸರ್ಕಾರ ವಾರ್ಷಿಕ 59 ಸಾವಿರ ಕೋಟಿ ವೆಚ್ಚ ತಗುಲಿದ್ದು ಗ್ಯಾರಂಟಿ ಯೋಜನೆಯಿಂದಾಗಿ ಬೇರೆ ಅಭಿವೃದ್ಧಿಗೆ ಅನುಧಾನದ ಕೊರತೆ ಕಂಡಿದ್ದು ಯೋಜನೆಗಳ ಸಾಧಕ-ಬಾಧಕಗಳ ಕುರಿತು ಸುರ್ಜೇವಾಲಾ ಅವರಿಗೆ ವಿವರಣೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ಚರ್ಚೆ ಗ್ಯಾರಂಟಿ ಯೋಜನೆಯಿಂದ ಶ್ರೀಮಂತರನ್ನು ಹೊರಗಿಡಲು ಒತ್ತಾಯ
ಗ್ಯಾರಂಟಿ ಫಲಾನುಭವಿಗಳೇ ಯೋಜನೆ ಬಗ್ಗೆ ಲೇವಡಿ ಮಾಡುತ್ತಿದ್ದಾರೆ ಗ್ಯಾರಂಟಿ ಯೋಜನೆಗಳು ನಿರೀಕ್ಷಿಸಿದಷ್ಟೂ ಮತ ತಂದುಕೊಟ್ಟಿಲ್ಲ ಬಡವರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ಮಾನದಂಡ ರೂಪಿಸಿ ಶ್ರೀಮಂತರ ಮನೆ ಹೆಣ್ಣುಮಕ್ಕಳಿಗೂ ಗೃಹಲಕ್ಷ್ಮೀ ಹಣ ದೊರೆಯುತ್ತಿದೆ ಗೃಹಲಕ್ಷ್ಮಿಗೆ ವೈಜ್ಞಾನಿಕ ಮಾನದಂಡ ರೂಪಿಸಿ ಹಣ ನೀಡಬೇಕು ಆಂಧ್ರದ ಜಗನ್ ಸರ್ಕಾರವೂ ಇಂಥ ಯೋಜನೆ ನೀಡಿಯೂ ಸೋತಿದೆ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮುಂದೆ ದೂರುಗಳನ್ನಿಟ್ಟ ಸಚಿವರು ಸಿಎಂ, ಡಿಸಿಎಂ ಜೊತೆ ಚರ್ಚಿಸುವ ಎಂದಿರುವ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ
ಹೈಕಮಾಂಡ್ ಮುಂದಿಟ್ಟ ವಾದವೇನು?
1. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ
2. ಶ್ರೀಮಂತರು ‘ಗ್ಯಾರಂಟಿ’ಗಳ ಪ್ರಯೋಜನ ಪಡೆದರೂ ಕಾಂಗ್ರೆಸ್ ಪರ ನಿಲ್ಲುವುದಿಲ್ಲ
3. ಉಳ್ಳವರನ್ನು ಯೋಜನೆಯಿಂದ ಕೈಬಿಟ್ಟರೆ 20 ಸಾವಿರ ಕೋಟಿ ಉಳಿತಾಯ
4. ಗೃಹಲಕ್ಷ್ಮಿ ಯೋಜನೆಗೆ ವೈಜ್ಞಾನಿಕ ಮಾನದಂಡ ರೂಪಿಸಿಲ್ಲ. ಬಡವರಿಗೆ ಮಾತ್ರ ಲಾಭ ಸಿಗಬೇಕು
5. ಅಂಧ್ರದಲ್ಲಿ ಜನಕಲ್ಯಾಣ ಯೋಜನೆ ರೂಪಿಸಿದರೂ ಜಗನ್ ಮೋಹನ್ ರೆಡ್ಡಿ ಸರ್ಕಾರ ಅಧಿಕಾರ ಕಳೆದುಕೊಂಡಿದೆ.