ಸಮನ್ವಿ ನಿಧನ ಹಿನ್ನೆಲೆ ನಟಿ ತಾರಾ, ತೀವ್ರ ದುಃಖತಪ್ತರಾಗಿದ್ದಾರೆ. ಸಮನ್ವಿ ಇನಿಲ್ಲ ಅಪಘಾತದಲ್ಲಿ ಸಮನ್ವಿ ಹೋಗಿಬಿಟ್ಟಳು ಎನ್ನುವ ಸುದ್ದಿ ನನಗೆ ಶಾಕ್ ಆಗಿದೆ. ನನಗೆ ನಂಬಲು ಸಾಧ್ಯವೇ ಆಗಲಿಲ್ಲ.ನಾನು ಬೆಂಗಳೂರಿನಲ್ಲಿರಲಿಲ್ಲ ಸಂಜೆ ನಂತರ ಎಷ್ಟು ಜನ ಕರೆ ಮಾಡಿ ವಿಷಯ ತಿಳಿಸಲು ಪ್ರಯತ್ನಿಸಿದರು. ಆಗಲೇ ನನಗೆ ಆತಂಕ ಶುರುವಾಗಿತ್ತು ಎಂದರು.
ಏಳು-ಎಂಟು ವಾರ ಆ ಬಾಲಕಿ ನಮ್ಮ ಜೊತೆ ಇದ್ದಳು. ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ 12 ತಾಯಂದಿರು, 12 ಮಕ್ಕಳು ಇದ್ದರು. ನನಗೆ ಎಲ್ಲ ಮಕ್ಕಳೊಂದಿಗೂ ಆಪ್ತತೆ ಪ್ರಾರಂಭವಾಗಿಬಿಟ್ಟಿತ್ತು ಆ ಶೋನ ಎಲ್ಲರೂ ನನಗೆ ಕುಟುಂಬ ಸದಸ್ಯರಿದ್ದಂತೆ. ಈಗ ಸಮನ್ವಿ ಹೋಗಿರುವುದು ನಮ್ಮ ಕುಟುಂಬ ಸದಸ್ಯೆ ಹೋದಂತೆ ಆಗಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
