ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾ ಪೈರಸಿ ಆಗಿದ್ದು, ಇದೀಗ ಸಿನಿಮಾ ನಿರ್ಮಾಪಕ ಲಹರಿ ವೇಲು ಪೊಲೀಸರ ಮೊರೆ ಹೋಗಿದ್ದಾರೆ. ನಗರದ ಉತ್ತರ ವಿಭಾಗದ ಡಿಸಿಪಿ ಗೆ ದೂರು ನೀಡಿ ಬಳಿಕ ಮಾತನಾಡಿದ ಅವರು, ರೈಡರ್ ಸಿನಿಮಾ ಬಿಡುಗಡೆ ಯಾದ ಎರಡೇ ದಿನಕ್ಕೆ ಪೈರಸಿ ಆಗಿದ್ದು, ಕನ್ನಡ ಚಿತ್ರರಂಗದ ಸಾಕಷ್ಟು ಚಿತ್ರಗಳು ಪೈರಸಿಯಿಂದಾಗಿ ನಷ್ಟ ಅನುಭವಿಸುತ್ತಿದೆ. ಟೆಲಿಗ್ರಾಂ ನಲ್ಲಿ ಚಿತ್ರ ಫೈರಸಿ ಮಾಡಿ ಕಿಡಿಗೇಡಿಗಳು ಲಿಂಕ್ ಹಾಕಲಾಗುತ್ತಿದ್ದು,
ಈ ರೀತಿ ಚಿತ್ರಗಳನ್ನು ಫೈರಸಿ ಮಾಡಿದ್ರೆ ನಿರ್ಮಾಪಕರು ಬೀದಿಗೆ ಬರುತ್ತಾರೆ ಎಂದು ದುಖಃದಿಂದ ಮಾತನಾಡಿದರು. ಇನ್ನೂ ಫೈರಸಿ ಮಾಡುತ್ತಿರುವವರು ಶಿಕ್ಷೆಗೆ ಗುರಿ ಆಗುತ್ತಿರುವುದು ಕಡಿಮೆ ಇದ್ದು, ಹೀಗಾಗಿ ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ. ಇಂತಹ ಆರೋಪಿಗಳಿಗೆ ಗೂಂಡಾ ಕಾಯ್ದೆಯಡಿ ಜೈಲಿಗಟ್ಟಬೇಕು. ಹೀಗಾಗಲೇ ಡಿಸಿಪಿ ವಿನಾಯಕ ಪಾಟೀಲ್ ಗೆ ದೂರು ನೀಡಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಇನ್ನೂ ಈ ಕೃತ್ಯದ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ ಎಂದು ನಿರ್ಮಾಪಕ ಲಹರಿ ವೇಲು ಮಾಹಿತಿ ನೀಡಿದ್ದಾರೆ.

