ಕಪ್ಪು ಸಮುದ್ರದಲ್ಲಿ ತೈಲ ಸೋರಿಕೆ: ರಶ್ಯದ ಕ್ರಸ್ನೊಡೊರ್ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಮಾಸ್ಕೋ: ಕಪ್ಪು ಸಮುದ್ರದಲ್ಲಿ ಹಾನಿಗೊಳಗಾದ ಟ್ಯಾಂಕರ್ ಹಡಗುಗಳಿಂದ ತೈಲು ಸೋರಿಕೆಯಾಗುತ್ತಿದೆ. ಸೋರಿಕೆಯಾಗುತ್ತಿರುವ ತೈಲವು ದಕ್ಷಿಣ ರಶ್ಯದ ಕ್ರಸ್ನೊಡೊರ್ ಪ್ರಾಂತದ ಕರಾವಳಿ ತೀರವನ್ನು ತಲುಪಿರುವ ಹಿನ್ನೆಲೆಯಲ್ಲಿ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಡಿಸೆಂಬರ್ 15ರಂದು ಕಪ್ಪು ಸಮುದ್ರದಲ್ಲಿ ತೈಲ ಸಾಗಿಸುತ್ತಿದ್ದ ಎರಡು ಟ್ಯಾಂಕರ್ ಹಡಗುಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಿದ್ದವು. ಒಂದು ಹಡಗು ಎರಡು ಹೋಳಾಗಿದ್ದರೆ, ಮತ್ತೊಂದು ಹಡಗಿಗೆ ಹಾನಿಯಾಗಿ ತೈಲ ಸೋರಿಕೆಯಾಗಿತ್ತು. ದುರಂತ ನಡೆದು 10 ದಿನಗಳ ಬಳಿಕವೂ ಕ್ರಸ್ನಡೋರ್ ಪ್ರಾಂತದ ಜನಪ್ರಿಯ ಪ್ರವಾಸೀ ತಾಣ ಅನಾಪ ಬೀಚ್‍ನತ್ತ … Continue reading ಕಪ್ಪು ಸಮುದ್ರದಲ್ಲಿ ತೈಲ ಸೋರಿಕೆ: ರಶ್ಯದ ಕ್ರಸ್ನೊಡೊರ್ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಣೆ