ಬಳ್ಳಾರಿ ;– ಬಳ್ಳಾರಿಯಲ್ಲಿ ಲೋಕಾಯುಕ್ತ ಬಲೆಗೆ ಆರ್.ಟಿ.ಓ ಅಧಿಕಾರಿ ಸಿಕ್ಕಿ ಬಿದ್ದಿದ್ದಾರೆ. ಆರ್.ಟಿ.ಓ ಅಧೀಕ್ಷ ಚಂದ್ರಕಾಂತ ಗುಡಿಮನಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಏಜೆಂಟ್ ಮೊಹಮ್ಮದ್ ರಾಜ್ ಇವರ ಬಳಿ 15,000/ರೂ ತೆಗೆದುಕೊಳ್ಳವಾಗ ಲೋಕ ದಾಳಿ ನಡೆಸಿದೆ. ನಿನ್ನೆ ರಾತ್ರಿ 10.20ರ ಸಮಯದಲ್ಲಿ ಹಣ ಪಡೆಯುವ ಸಂದರ್ಭದಲ್ಲಿ ಚಂದ್ರಕಾಂತ್ ಮತ್ತು ಮೊಹಮ್ಮದ್ ರಾಜ್ ಟ್ರ್ಯಾಪ್ ಮಾಡಲಾಗಿದೆ.
ಇಬ್ಬರನ್ನು ಬಳ್ಳಾರಿಯ ಹಾಲಿ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ, ಇಂದು ಬೆಳಿಗ್ಗೆ ನ್ಯಾಯಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ. ಸಾರ್ವಜನಿಕರಿಂದ ಆರ್.ಟಿ.ಓ ಅಧಿಕಾರಿಗಳ ಮೇಲೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದವು, ಇತ್ತೀಚೆಗೆ ನಗರ ಶಾಸಕ ಭರತ್ ರೆಡ್ಡಿ ಅವರು ಈ ಕುರಿತು ಆರ್.ಟಿ.ಓ ಕಛೇರಿಗೆ ಭೇಟಿ ನೀಡಿ ಖಡಕ್ ಎಚ್ಚರಿಕೆ ನೀಡಿರುವುದನ್ನು ಸ್ಮರಿಸಬಹುದು.