ಬೆಂಗಳೂರು: ಆಗಸ್ಟ್ ತಿಂಗಳಿನಲ್ಲಿ ಸಾಲು-ಸಾಲು ರಜೆಗಳು ಸಿಗುತ್ತಿದ್ದು ಇಂದರ ಮೇಲೊಂದು ಹಬ್ಬ ಹೀಗೆ ಸಾಗುತ್ತಿದ್ದು ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿದ್ದ ಜನರಿಗೆ ಈ ರಜೆ ಒಂಥರಾ ಮಜಾ ನೀಡುತ್ತುದ್ದು ಆರಾಮದಾಯಕವಾಗಿ ಇದ್ದಾರೆ
ಆಗಸ್ಟ್ 15 ಗುರುವಾರ ಸ್ವಾತಂತ್ರ್ಯ ದಿನಾಚರಣೆ. ಹಾಗೂ ಆಗಸ್ಟ್ 19ರಂದು ರಕ್ಷಾ ಬಂಧನ ಇದೆ.ಹಾಗೆ ಆಗಸ್ಟ್ 16ರಂದು ರಜೆ ತೆಗೆದುಕೊಂಡರೆ, ಆಗಸ್ಟ್ 17 ಮತ್ತು 18 ಶನಿವಾರ, ಭಾನುವಾರ ವೀಕೆಂಡ್ ರಜೆ. ಒಟ್ಟೂ 5 ದಿನ ರಜೆ ಸಿಗುವುದರಿಂದ ಲಾಂಗ್ ವೀಕೆಂಡ್ ಆಗಿದೆ.
78ನೇ ಸ್ವಾತಂತ್ರ್ಯ ದಿನಾಚರಣೆ: ರಾಜ್ಯದ 20 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ !
ಲಾಂಗ್ ವೀಕ್ ಎಂಡ್ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ಹೋಗುವ ಜನರ ಸಂಖ್ಯೆ ಹೆಚ್ಚಿರುತ್ತೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಆಗಲಿದೆ. ಇದು ಟ್ರಾಫಿಕ್ ಪೊಲೀಸರಿಗೆ ತಲೆ ನೋವಾಗಿದೆ.
ಸಾಲುಸಾಲು ರಜೆಯಿಂದ ಪ್ರವಾಸಿ ತಾಣಗಳಲ್ಲಿ ಜನ ದಟ್ಟಣೆ ಜಾಸ್ತಿ ಆಗುತ್ತೆ. ಮಳೆ ಕಡಿಮೆಯಾದ ಹಿನ್ನೆಲೆ ಪ್ರವಾಸಿ ತಾಣಗಳಿಗೆ ಹಾಕಿದ್ದ ನಿರ್ಬಂಧವನ್ನು ತೆಗೆಯಲಾಗಿದೆ. ಆದ್ದರಿಂದ ಈ ವಾರಾಂತ್ಯ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತದೆ. ಈ ಹಿನ್ನೆಲೆ ಪ್ರವಾಸಿ ತಾಣಗಳಲ್ಲೂ ರಷ್ ಆಗುತ್ತೆ.