ಬೆಂಗಳೂರು: ಮಹಿಳೆಯನ್ನು ಬರ್ಬರವಾಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚನಾ ರೆಡ್ಡಿ ಅವರ ಮೂರನೇ ಪತಿ ನವೀನ್, ಸೇರಿ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. 38 ವರ್ಷದ ಮಹಿಳೆ ಅರ್ಚನಾ ರೆಡ್ಡಿ ಮೂವರ ಮಚ್ಚಿ ನೇಟಿಗೆ ಬಲಿಯಾಗಿದ್ದ ರು. ನವೀನ್ ಸಂತೋಷ್ ಹಾಗೂ ಅನೂಪ್ ಮೂವರು ಆರೋಪಿಗಳೆಂದು ಗುರುತಿಸಲಾಗಿದೆ. ಹೊಸರೋಡ್ ಸಿಗ್ನಲ್ ಬಳಿ ಅರ್ಚನಾ ರೆಡ್ಡಿಯನ್ನು ಹತ್ಯೆ ಮಾಡಲಾಗಿತ್ತು.
ಆಸ್ತಿ ವಿವಾದ ಹಿನ್ನೆಲೆ ಪತ್ನಿಯನ್ನು ಕೊಚ್ಚಿ ಪತಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಲವು ವರ್ಷಗಳ ಹಿಂದೆ ಅರವಿಂದ್ ಎಂಬಾತ ನನ್ನು ಅರ್ಚನಾ ಮದುವೆಯಾಗಿದ್ದರು. ಅರವಿಂದ್ ಜೊತೆ ಇದ್ದಾಗ ಒರ್ವ ಮಗ ಮತ್ತು ಒರ್ವ ಮಗಳು ಇದ್ದಳು. ಕಾರಣಾಂತರ ಗಳಿಂದ ಅರವಿಂದ್ ನಿಂದ ಅರ್ಚನಾ ಬೇರೆ ಅಗಿದ್ದರು. ಬಳಿಕ ಸಿದ್ದಿಕ್ ಎಂಬಾತನ ಜೊತೆಗಿದ್ದ ಅರ್ಚನಾ, ಎರಡು ವರ್ಷಗಳ ಬಳಿಕ ದೂರವಾ ಗಿದ್ದರು.

ನಂತರ ಕಳೆದ ಐದಾರು ವರ್ಷಗಳಿಂದ ನವೀನ್ ಜೊತೆಗೆ ಸಂಪರ್ಕ ಹೊಂದಿದ್ದರು. ನಂತರ ನವೀನ್ ಜೊತೆಗೆ ಅರ್ಚನಾ ಮದುವೆ ಮಾಡಿಕೊಂಡಿದ್ದರು. ಅರ್ಚಾನ ರೆಡ್ಡಿಗೆ ಬೇರೆ ಯುವಕರೊಂದಿಗೆ ಸಂಬಂಧ ಇತ್ತು ಎಂದು ನವೀನ್ ಗಲಾಟೆ ಮಾಡಿದ್ದ ಇದೇ ಕಾರಣಕ್ಕೆ ನವೀನ್ ವಿರುದ್ಧ ಕೇಸ್ ದಾಖಲಾಗಿತ್ತು. ಅರ್ಚನಾ ನೀಡಿದ್ದ ದೂರಿನ ಅನ್ವಯ ಕೇಸ್ ದಾಖಲಾಗಿದ್ದು, ಇದರಿಂದ ಕೋಪಗೊಂಡು ಕೊಲೆ ಮಾಡಿದ್ದಾನೆ ಎಂದು ತನಿಕೆಯ ನಂತರ ಮಾಹಿತಿ ತಿಳಿದು ಬಂದಿದೆ.