ಬೆಂಗಳೂರು: ಗೂಂಡಾ ಕಾಯ್ದೆಯಡಿ ಆರೋಪಿ ರೌಡಿ ಶೀಟರ್ ಬೆಂಗಳೂರಿನ ಸಿದ್ದಾಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರೌಡಿ ಶೀಟರ್ ವೆಂಕಟೇಶ್ ಅಲಿಯಾಸ್ ಒಂಟಿ ಕೈ ವೆಂಕಟೇಶ್ ಬಂಧಿತ ರೌಡಿಶೀಟರ್ ಆಗಿದ್ದಾನೆ. ಕೊಲೆ ಯತ್ನ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ರೌಡಿಶೀಟರ್ ವೆಂಕಟೇಶ್ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಇನ್ನೂ ಬೇರೆ ರೌಡಿಶೀಟರ್ ಗಳ ಜೊತೆ ಸೇರಿ ಅಫರಾಧ ಕೃತ್ಯಗಳಲ್ಲಿ ವೆಂಕಟೇಶ್ ಭಾಗಿಯಾಗುತ್ತಿದ್ದ. ರೌಡಿಶೀಟರ್ ಕುಳ್ಳು ರಿಜ್ವಾನ್ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಸದ್ಯ ಗೂಂಡಾ ಕಾಯ್ದೆಯಡಿ ರೌಡಿಶೀಟರ್ ವೆಂಕಟೇಶ್ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
