ಬೆಂಗಳೂರು : ಪುಡಿ ರೌಡಿಯೊಬ್ಬ ಪುಂಡಾಟ ನಡೆಸಿ ಕುಡಿದ ಮತ್ತಿನಲ್ಲಿ ಸಿಕ್ಕಸಿಕ್ಕವರ ಜೊತೆ ಗಲಾಟೆ ಮಾಡಿ ಚಾಕು ಹಾಕಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡ ರಾತ್ರಿ ನಡೆದಿದೆ.
ಇತ್ತೀಚಿಗಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಈ ಚಿಲ್ಲರೆ ದುಷ್ಕರ್ಮಿಯು ಡ್ರ್ಯಾಗನ್ ಹಿಡಿದು ಏರಿಯಾದಲ್ಲಿ ಸಿಕ್ಕಸಿಕ್ಕವರಿಗೆ ಹಲ್ಲೆ ಎಸೆಗಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೊದಲು ಪಾನಿ ಪುರಿ ಅಂಗಡಿಯನ ಜೊತೆ ಕಿರಿಕ್ ನಡೆಸಿದ್ದ. ಗಲಾಟೆ ವೇಳೆ ಚಾಕು ಇರಿದಿದ್ದಲ್ಲದೇ ಗಲಾಟೆಯನ್ನು ತಡೆಯಲು ಬಂದ ಮತ್ತೆ ಮೂವರಿಗೆ ಡ್ರ್ಯಾಗನ್ ಇರಿದು ಪರಾರಿಯಾಗಿದ್ದಾನೆ.
ಇತ್ತೀಚೆಗಷ್ಟೇ ಜೈಲಿನಿಂದ ರಿಲೀಸ್ ಆಗಿ ಹೊರ ಬಂದಿದ್ದ ರೌಡಿ ಕದಂಬ ಇದೀಗ ಮತ್ತೆ ಏರಿಯಾದಲ್ಲಿ ಪುಂಡಾಟ ಮೆರೆದಿದ್ದಾನೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಐದು ಮಂದಿಯಿಂದ ದೂರು ದಾಖಲಾಗಿದ್ದು ಪೊಲೀಸರು ತಲಾಶ್ ನಲ್ಲಿ ತೊಡಗಿದ್ದಾರೆ.