ಬೆಂಗಳೂರು:- ಪರಪ್ಪನ ಅಗ್ರಹಾರ ಜೈಲಲ್ಲಿ ರೌಡಿಗಳು ಬಡಿದಾಡಿಕೊಂಡ ಘಟನೆ ಜರುಗಿದೆ.
ರೌಡಿಶೀಟರ್ ಫರ್ನಿಚರ್ ಶಿವನ ಮೇಲೆ ಅಟ್ಯಾಕ್ ನಡೆದಿದೆ. ಜನವರಿ 25ನೇ ತಾರೀಖು ವಿವೇಕನಗರ ಲಿಮಿಟ್ಸ್ ನಲ್ಲಿ ನಾಲ್ಕೈದು ಪುಡಿ ರೌಡಿಗಳ ತಂಡ ಮಿಲಿಟ್ರಿ ಸತೀಶ್ ಎಂಬ ರೌಡಿಶೀಟರ್ ನ ಮನೆಗೆ ನುಗ್ಗಿ ಹತ್ಯೆ ಮಾಡಿದ್ರು. ಈ ಕೇಸ್ ನಲ್ಲಿ ಆರೋಪಿಗಳು ಅರೆಸ್ಟ್ ಆಗಿದ್ರು. ಆರೋಪಿಗಳಿಗೆ ಸುಪಾರಿ ಕೊಟ್ಟೋನೆ ಈ ಫರ್ನಿಚರ್ ಶಿವ, ಈ ಬಗ್ಗೆ ಮಾಹಿತಿ ಪಡೆದು ಸಿಸಿಬಿ ಫರ್ನಿಚರ್ ಶಿವನನ್ನ ವಶಕ್ಕೆ ಪಡೆದು ಜೈಲಿಗೆ ಕಳಿಸಿದ್ರು. ಇತ್ತ ಮಿಲಿಟರಿ ಸತೀಶನ ಸಹಚರರು ಫರ್ನಿಚರ್ ಶಿವನ ಮೇಲೆ ಕಣ್ಣಿಟ್ಟಿದ್ರು.
ವಿವೇಕನಗರ ಸುನೀಲ್ ಆ್ಯಂಡ್ ಟೀಂ ತನ್ನ ಸ್ನೇಹಿತ ಮಿಲಿಟ್ರಿ ಸತೀಶನ ಸಾವಿಗೆ ರಿವೇಂಜ್ ತಗೋಬೇಕು ಅಂತಾ ಕಾಯ್ತಿದ್ರು. ಈಗಾಗಲೇ ಜೈಲಲ್ಲಿದ್ದ ಸುನೀಲ್ ಟೀಂಗೆ ಫರ್ನಿಚರ್ ಶಿವ ಕಣ್ಣಿಗೆ ಬಿದ್ದಿದ್ದ. ಸ್ಕೆಚ್ ಹಾಕಿದ್ದ ವಿವೇಕನರ ಸುನೀಲನ ಟೀಂ ಜೈಲಲ್ಲಿಯೇ ಅಟ್ಯಾಕ್ ಮಾಡಿದೆ. ಸಣ್ಣ ಸಣ್ಣ ಮೊಳೆ, ಕಟ್ಟಿಗೆ ಪೀಸ್ ಸೇರಿ ಜೈಲಲ್ಲಿ ಕೈಗೆ ಸಿಕ್ಕ ವಸ್ತುಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಸದ್ಯ ಗಾಯಗೊಂಡಿರೋ ಫರ್ನಿಚರ್ ಶಿವನಿಗೆ ಪರಪ್ಪನ ಅಗ್ರಹಾರ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.