ನ್ಯೂಜಿಲೆಂಡ್: ಕ್ರಿಕೆಟ್ ತಂಡದ ಶ್ರೇಷ್ಠ ಕ್ರಿಕೆಟರ್‌ಗಳಲ್ಲಿ ಒಬ್ಬರೆನಿಸಿರುವ ರಾಸ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಳ್ಳ್ಳುವುದಾಗಿ ಘೋಷಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ಅಂತಿಮ ಪಂದ್ಯವನ್ನು ಆಡಿವ ಬಳಿಕ ನಿವೃತ್ತನಾಗುತ್ತಿರುವುದಾಗಿ ರಾಸ್ ಟೇಲರ್ ಘೋಷಣೆ ಮಾಡಿದ್ದಾರೆ. ಈ ಪಂದ್ಯ ರಾಸ್ ಟೇಲರ್ ಅವರ 112ನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿರಲಿದ್ದು ನ್ಯೂಜಿಲೆಂಡ್ ತಂಡದ ಪರ ಅತಿ ಹೆಚ್ಚು ಪಂದ್ತವನ್ನಾಡಿದ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಟೇಲರ್ ಸರಿಗಟ್ಟಲಿದ್ದಾರೆ.
37ರ ಹರೆಯದ ಈ ಅನುಭವಿ ಆಟಗಾರ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಳೆದ ಫೆಬ್ರವರಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧಧ ಸರಣಿಯಲ್ಲಿ ಭಾಗಿಯಾಗಿದ್ದರು. ನಂತರ ನೆದರ್ಲ್ಯಾಂಡ್ಸ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿಯೂ ಆಡಿದ್ದರು. ಹೀಗಾಗಿ ಈ ವರ್ಷದ ಏಪ್ರಿಲ್ 4ರಂದು ಹ್ಯಾಮಿಲ್ಟನ್‌ನಲ್ಲಿ ಆಡಿದ ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಸರಣಿಯ ನಾಲ್ಕನೇ ಪಂದ್ಯ ತವರಿನಲ್ಲಿ ಆಡಿದ ಅಂತಿಮ ಏಕದಿನ ಪಂದ್ಯವಾಗಿದೆ. ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆ ರಾಸ್ ಟೇಲರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

“ಇದೊಂದು ಅದ್ಭುತವಾದ ಪ್ರಯಾಣವಾಗಿತ್ತು. ನನಗೆ ಸಾಧ್ಯವಿರುವವರೆಗೆ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವು ದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ” ಎಂದು ಟೇಲರ್ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ. “ಅನೇಕ ಶ್ರೇಷ್ಠ ಆಟಗಾರರ ಜೊತೆಗೆ ಹಾಗೂ ವಿರುದ್ಧವಾಗಿ ಆಡುವ ಅವಕಾಶ ನನಗೆ ದೊರೆತಿದೆ. ಈ ಹಾದಿಯುದ್ದಕ್ಕೂ ನನಗೆ ಸಾಕಷ್ಟು ಸ್ಮರಣೀಯ ಕ್ಷಣಗಳು ಹಾಗೂ ಗೆಳೆತನಗಳು ದೊರೆತಿದೆ. ಆದರೆ ಎಲ್ಲಾ ಉತ್ತಮ ಸಂಗತಿಗಳು ಒಂದು ದಿನ ಅಂತ್ಯವಾಗಬೇಕಿದೆ. ನನ್ನ ಪಾಲಿಗೆ ಇದು ಸೂಕ್ತವಾದ ಸಮಯ ಎನಿಸುತ್ತಿದೆ” ಎಂದು ರಾಸ್ ಟೇಲರ್ ಪ್ರಕಟಣೆಯಲ್ಲಿ ಬರೆದುಕೊಂಡಿದ್ದಾರೆ.