ಹೊಸಕೋಟೆ:- ಎಟಿಎಂ ಗೆ ಕನ್ನ ಹಾಕಲು ಯತ್ನಿಸಿದ ದರೋಡೆಕೋರರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫೈನಾನ್ಸ್ ಕಿರುಕುಳದ ಸುದ್ದಿ ಬೆನ್ನಲ್ಲೇ ಹೈಕೋರ್ಟ್ ಮೆಟ್ಟಿಲೇರಿದ ಮಲ್ಯ! ಕಾರಣ?
ಕೆನರಾ ಬ್ಯಾಂಕ್ ಎಟಿಎಂನ ರೋಲಿಂಗ್ ಶೆಟರ್ ಎತ್ತೀ ಖದೀಮರು ಹೊಳಗಡೆ ನುಸುಳಿದ್ದಾರೆ. ಬಳಿಕ ಏಟಿಎಂ ನ ಅಲರ್ಟ್ ಸೌಂಡ್ ನಿಂದ ಭೂಪ ಕಾಲ್ಕಿತ್ತಿದ್ದಾನೆ. ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಕೆನರಾ ಬ್ಯಾಂಕ್ ನ ATM ಇದಾಗಿದ್ದು, ಕಳ್ಳತನಕ್ಕೆ ಬಂದಿದ್ದ ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದು ಬೆಳ್ಳಂಬೆಳಿಗ್ಗೆ 4:30 ರ ಸುಮಾರಿಗೆ ಈ ಘಟನೆ ಜರುಗಿದೆ.
ಹೊಸಕೋಟೆ -ಕೋಲಾರ ರಾಷ್ಟ್ರೀಯ ಹೆದ್ದಾರಿ ತಾವರೆಕೆರೆ ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ ಈ ಎಸಗಿದ್ದು, ನಂದಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಾಗಿದೆ.