ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಲಿತದ ಹಾವು ಏಣಿ ಆಟ ಶುರುವಾಗಿದೆ. ಇಸ್ರೇಲ್ ಯುದ್ಧ, ಅಂತರಾಷ್ಟ್ರೀಯ ಟ್ರೆಂಡ್ ಬದಲಾವಣೆ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದ್ದು ಇಂದು ಚಿನ್ನದ ದರದಲ್ಲಿ ಸ್ಥಿರತೆ ಕಂಡುಬಂದಿದೆ. ಇಂದಿನ ಚಿನ್ನ-ಬೆಳ್ಳಿಯ ದರ ಎಷ್ಟಿದೆ ಎಂದು ಇಲ್ಲಿ ತಿಳಿದುಕೊಳ್ಳೋಣ.
ಇಂದು ಚಿನ್ನದ ದರ ಹೀಗಿದೆ. ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,650 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್ ಬೆಲೆ 6,164 ರೂಪಾಯಿ ಇದೆ. ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 56,500 ಆಗಿದೆ. 24 ಕ್ಯಾರೆಟ್ 10 ಗ್ರಾಂ ನ ಬೆಲೆ, 61,640 ಆಗಿದೆ. ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡುಬಂದಿದ್ದು, ಶನಿವಾರದಿಂದ ಭಾನುವಾರಕ್ಕೆ ವೀಕೆಂಡ್ನಲ್ಲಿ ಸ್ಥಿರತೆ ಕಂಡುಬಂದಿದೆ.
ಬೆಂಗಳೂರಲ್ಲಿ ಚಿನ್ನದ ದರ
ಇನ್ನು ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಲ್ಲಿಯೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,650 ರೂ ಇದ್ದು,10 ಗ್ರಾಂ ಬೆಲೆ 56,500 ರೂಪಾಯಿ ಇದೆ.
ಬೆಂಗಳೂರಲ್ಲಿ ಬೆಳ್ಳಿಯ ದರ
ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದ್ದರೆ,, ಇತ್ತ ಬೆಳ್ಳಿಯ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಬೆಂಗಳೂರಲ್ಲಿ ಬೆಳ್ಳಿಯ ದರ ಒಂದು ಗ್ರಾಂಗೆ 74 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಯ ದರ 740 ರೂಪಾಯಿ ಇದೆ. ಕೆ.ಜಿ ಬೆಳ್ಳಿಯ ದರ 74,000 ರೂಪಾಯಿ ಇದೆ.ಬೆಳ್ಳಿಯ ದರದಲ್ಲಿ 1.25 ರುಪಾಯಿ ಏರಿಕೆ ಆಗಿದೆ.