ಬೆಂಗಳೂರು: ಫುಡ್ ಪ್ಯಾಕೆಟ್ ನೀಡಲು ತಡವಾಗಿದ್ದನ್ನು ಪ್ರಶ್ನಿಸಿದ ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ ಮೆರೆದಿರುವ ಘಟನೆ ನಗರದ ವೈಟ್ ಫೀಲ್ಡ್ ಬಳಿಯ ರೆಸ್ಟೋರೆಂಟ್‍ವೊಂದರಲ್ಲಿ ನಡೆದಿದೆ. ಫುಡ್ ಡೆಲಿವರಿ ಬಾಯ್ ಸಂಜಯ್ ಫುಡ್ ಪ್ಯಾಕೆಟ್ ಪಡೆಯಲು ರೆಸ್ಟೋರೆಂಟ್‍ಗೆ ಬಂದಿದ್ದರು. ಈ ವೇಳೆ ಫುಡ್ ಪ್ಯಾಕೆಟ್ ನೀಡಲು ತಡವಾದ ಹಿನ್ನೆಲೆ ಗ್ರಾಹಕರಿಗೆ ತಲುಪಿಸಲು ತಡವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಮಹಿಳಾ ಸಿಬ್ಬಂದಿ ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ ಜಗಳ ವಿಕೋಪಕ್ಕೆ ತಿರುಗಿ ಕುತ್ತಿಗೆ ಪಟ್ಟಿ ಹಿಡಿದು ಡೆಲಿವರಿ ಬಾಯ್ ನನ್ನು ಅಲ್ಲಿಂದ ಹೊರದಬ್ಬಿದ್ದಾರೆ. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಕನ್ನಡಪರ ಯುವ ಹೋರಾಟಗಾರರದ ಚೇತನ್ ಗೌಡ ಹಾಗೂ ಪ್ರಜ್ವಲ್ ಗೌಡ ನೇತೃತ್ವದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.
