ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಮಾಡಿದ ಬಳಿಕ ಡಿಲೀಟ್ ಮಾಡಿದ್ದ ಫೋಟೋಗಳನ್ನು ಪೊಲೀಸರು ಆರೋಪಿಗಳ ಮೊಬೈಲ್ನಿಂದ ರಿಟ್ರೀವ್ ಮಾಡಿದ್ದಾರೆ. 10ಕ್ಕೂ ಹೆಚ್ಚು ಫೋಟೋ ರಿಟ್ರೀವ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಮಗನ ದಯನೀಯ ಸ್ಥಿತಿಯನ್ನು ಕಂಡು, ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಕಣ್ಣೀರಿಟ್ಟಿದ್ದಾರೆ.
ಈ ಸುದ್ದಿ ತಿಳಿದ ನಂತರ ಮಾತನಾಡಿದ ಅವರು, ಅವನ ಸುದ್ದಿ ಕೇಳಿ.. ಕೇಳಿ.. ನಾವೂ ಸಹ ಜೀವಂತ ಹೆಣ ಆಗಿಬಿಟ್ಟಿದ್ದೇವೆ. ಏನು ಹೇಳ್ಬೇಕು ಗೊತ್ತಾಗುತ್ತಿಲ್ಲ. ನನ್ನ ಮಗನಿಗೆ ಒಡೆಯುವಾಗ ಅಷ್ಟು ಜನರಲ್ಲಿ ಒಬ್ಬರಿಗೂ ಮಾನವೀಯತೆ ಇರಲಿಲ್ವಾ? ನನ್ನ ಮಗ ಕಿರುಚಾಡಿ, ಕೂಗಾಡಿದ್ರೂ ಅವರಿಗೆ ಕರುಳು ಚುರುಕ್ ಅನ್ನಲಿಲ್ವಾ? ಎಷ್ಟು ರಾಕ್ಷಸಿ ಮನೋಭಾವ ಇರಬೇಕು. ಇಡೀ ಪ್ರಪಂಚದಲ್ಲೇ ಇಂತಹ ಘಟನೆ ನಡೆದಿಲ್ಲ ಅನ್ನಿಸುತ್ತೆ ಎಂದು ಕಣ್ಣೀರಿಟ್ಟಿದ್ದಾರೆ.
Teachers Day 2024: ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಇತಿಹಾಸ, ಪ್ರಾಮುಖ್ಯತೆ ಗೊತ್ತೇ? ಇಲ್ಲಿದೆ ವಿವರ
ನನಗಂತೂ ಕರುಳು ಕಿತ್ತುಬರುತ್ತಿದೆ, ಆ ದೇವರೇ ಅವರಿಗೆ ತಕ್ಕ ಪಾಠ ಕಲಿಸಬೇಕು. ಅವರು ಎಂತಹ ವಾತಾವರಣದಲ್ಲಿ ಬೆಳೆದಿರಬಹುದು, ಎಷ್ಟು ಕೆಟ್ಟದ್ದಾಗಿ ವರ್ತಿಸಿದ್ದಾರೆ? ಏನ್ ಹೇಳಬೇಕು ಗೊತ್ತಾಗುತ್ತಿಲ್ಲ. ಮೊದಲೇ ನನಗೆ ಆರೋಗ್ಯ ಸರಿಯಿಲ್ಲ, ಕುಟುಂಬದಲ್ಲಿ ನೆಮ್ಮದಿಯಿಲ್ಲ. ಈಗ ನನ್ನ ಸೊಸೆಗೆ ಏನು ಹೇಳಲಿ? ಎಂದು ಭಾವುಕರಾಗಿದ್ದಾರೆ.