ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಆಂಡ್ ಗ್ಯಾಂಗ್ ವಿರುದ್ದ ಹೊಸ ಅಸ್ತ್ರ ಪ್ರಯೋಗಕ್ಕೆ ಪೊಲೀಸರು ಮುಂದಾಗಿದ್ದಾರೆ. ಎಫ್ ಎಸ್ ಎಲ್ ರಿಪೋರ್ಟ್ ಬಂದೋಡನೇ ಖಾಕಿ ಮಿಡ್ ನೈಟ್ ಮಿಟಿಂಗ್ ನಡೆಸಿದೆ. ಕೈ ಸೇರಿದ್ದು ಕೃತ್ಯದ ಒಂದೋಂದು ರಿಪೋರ್ಟ್ ಕಾನೂನು ತಜ್ಞರ ಜೊತೆ ಚರ್ಚಿಸಿ ಚಾರ್ಜ್ ಶೀಟ್ ಗೆ ರೆಡಿ ಮಾಡಲಿದ್ದಾರೆ .
ರಾಜಧಾನಿಯಲ್ಲಿ ನಿಲ್ಲದ ಕಿಲ್ಲರ್ BMTC ಹಾವಳಿ: ನಡು ರಸ್ತೆಯಲ್ಲಿ ವಾಹನ ಸವಾರರ ಚೀರಾಟ- ಕೂಗಾಟ!
ಜೂನ್ 8 ರಂದು ಚಿತ್ರದುರ್ಗ ರೇಣುಕಾಸ್ವಾಮಿ ಯನ್ನ ದರ್ಶನ್ ಆ್ಯಂಡ್ ಗ್ಯಾಂಗ್ ಚಿತ್ರಹಿಂಸೆ ನೀಡಿ ಕೊಲೆ ಮಾಡಿತ್ತು. ಈ ಸಂಬಂಧ ದರ್ಶನ್ ಪವಿತ್ರ ಗೌಡ ಸೇರಿ 17 ಆರೋಪಿಗಳನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ರು. ಕೊಲೆ ಬಳಿಕ ಪ್ರತ್ಯೇಕ ಹಾಗೂ ಪರೋಕ್ಷವಾಗಿ ಸಾಕ್ಷ್ಯ ಹಾಗೂ ರಕ್ತ ಕಲೆ, ಡಿಎನ್ಎ ಟೆಸ್ಟ್, ಹೇರ್ ಸ್ಯಾಂಪಲ್, ಉಗುರಿನ ಚುರನ್ನ ಸಂಗ್ರಹಿಸಿದ್ದ ವೈದ್ಯರು. ಪರೀಕ್ಷೆ ನಡೆಸಿ ರಿಪೋರ್ಟ್ ಅನ್ನು ಪೊಲೀಸರಿಗೆ ನಿನ್ನೆಸಂಜೆ ನೀಡಿದ್ದಾರೆ.
ಪ್ರಕರಣದಲ್ಲಿ ಇದೀಗಾ ಶೇಕಡ 70% ರಷ್ಟು ರಿಪೋರ್ಟ್ ಗಳು ಮಾತ್ರ ಈಗ ಪೊಲೀಸರ ಕೈ ಸೇರಿದೆ. ಹೈದರಾಬಾದ್ FSL ನಿಂದ ಎಲೆಕ್ಟ್ರಾನಿಕ್ ವಸ್ತುಗಳ ರಿಪೋರ್ಟ್ ಬರಬೇಕಿದೆ.ಸದ್ಯ ಇನ್ನೂ 30% FSL ರಿಪೋರ್ಟ್ ಗಾಗಿ ಕಾಯುತ್ತಿರೋ ಪೊಲೀಸರು. ಇ-ಮೇಲ್ ಮೂಲಕ FSL ವರದಿಗಳು ಬಂದಿದ್ದೆ. ಇತ್ತ ರಿಪೋರ್ಟ್ ಗಳು ಬರುತ್ತಿದ್ದಂತೆ ನಿನ್ನೆ ಸಂಜೆ ಪೊಲೀಸ್ ಕಮಿಷನರ್ ತನಿಖಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ..
ಎಫ್ ಎಸ್ ಎಲ್ ವರದಿಯ ಪ್ರಮುಖ ಅಂಶಗಳ ಕುರಿತಂತೆ ಚರ್ಚೆ ನಡೆಸಿದ್ದು.ತನಿಖೆ ಹಾಗೂ ಎಫ್ ಎಸ್ ಎಲ್ ವರದಿ ತಾಳೆ ಆಗ್ತಿದ್ಯಾ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿರುವ ಕಮೀಷನರ್ ದಯಾನಂದ್.ತನಿಖಾ ತಂಡದ ಜೊತೆ ಮೀಟಿಂಗ್ ನಂತರ ಕಾನೂನು ತಜ್ಞರ ಮೋರೆ ಹೋಗಿದ್ದಾರೆ.
ಹೆಚ್ಚುವರಿಯಾಗಿ ಏನಾದ್ರೂ ಎಫ್ ಎಸ್ ಎಲ್ ವರದಿಗೆ ಮತ್ತೆ ಜಪ್ತಿ ಮಾಡಿದ ವಸ್ತುಗಳನ್ನು ಕಳುಹಿಸಬೇಕಾ..? ಹೀಗೆ ನಾನಾ ಅಂಶಗಳ ಕುರಿತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ.
ಒಂದು ವೇಳೆ ಈ ವರದಿ ಆರೋಪಿ ಗಳನ್ನು ಶಿಕ್ಷೆಗೆ ಗುರಿಪಡಿಸಲು ಸಾಲಲ್ಲ ಅಂದ್ರೆ ಮತ್ತೆ ಮಾದರಿಗಳನ್ನ ಸಂಗ್ರಹಿಸಿ ಎಫ್ ಎಸ್ ಎಲ್ ಪರೀಕ್ಷೆ ಕಳುಹಿಸಲಿದ್ದಾರೆ.
ಒಟ್ಟಾರೆ ಡಿ ಗ್ಯಾಂಗ್ ಕೃತ್ಯದ ಒಂದು ವರೆ ತಿಂಗಳ ನಂತರ ರಿಪೋರ್ಟ್ ಗಳು ಪೊಲೀಸರ ಕೈ ಸೇರಿದ್ದು. ದರ್ಶನ್ ಗ್ಯಾಂಗ್ ಯಾವ ಕಂಟಕ ಎದುರಾಗುತ್ತೆ ಕಾದನೋಡಬೇಕು.