ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ ಸೆರೆವಾಸದಲ್ಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರು ಪೊಲೀಸರು ಯಾವಾಗ ತನಿಖೆ ಮುಗಿಸುತ್ತಾರೆ. ತನಿಖೆ ಮುಗಿದ ಮೇಲೆ ಚಾರ್ಜ್ಶೀಟ್ ಯಾವಾಗ ಸಲ್ಲಿಸುತ್ತಾರೆ ಅನ್ನೋದನ್ನೇ ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಒಂದೊಂದು ಸಾಕ್ಷ್ಯಗಳು ಪೊಲೀಸರ ಕೈಸೇರ್ತಿವೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಆರೋಪಿಗಳು ತಪ್ಪಿಸಿಕೊಳ್ಳೋದಕ್ಕೆ ಮಾಡಿದ್ದ ಒಂದೊಂದೇ ಪ್ಲ್ಯಾನ್ಗಳನ್ನು ತನಿಖಾಧಿಕಾರಿಗಳು ಬಯಲು ಮಾಡುತ್ತಿದ್ದಾರೆ. ಮನೆಯಲ್ಲಿರುವ ಸಿಸಿಟಿವಿ ಡಿಲೀಟ್ ಮಾಡಿರೋದ್ರಿಂದ ಹಿಡಿದು ಎಲ್ಲಾ ಸಾಕ್ಷ್ಯ ನಾಶಕ್ಕೆ ಆರೋಪಿಗಳು ಯತ್ನಿಸಿದ್ದರು. ಆದ್ರೆ, ತನಿಖಾಧಿಕಾರಿಗಳು ಅದೆಲ್ಲಾ ಎಫ್ಎಸ್ಎಲ್ (FSL) ಮೂಲಕ ರಿಟ್ರೀವ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
PM Narendra Modi: ಪ್ರಧಾನಿ ನರೇಂದ್ರ ಮೋದಿ ಉಪಯೋಗಿಸುವ ಫೋನ್ ಯಾವುದು ಗೊತ್ತಾ..?
ಅದೇ ರೀತಿ ದರ್ಶನ್ ತಪ್ಪಿಸಿಕೊಳ್ಳೋದಕ್ಕೆ ರಾಜಕಾರಣಿಗೆಲ್ಲಾ ಕರೆ ಮಾಡಿದ್ದರಂತೆ, ಬೆಂಗಳೂರಿನಿಂದ ಮೈಸೂರಿಗೆ `ಡೆವಿಲ್’ ಚಿತ್ರದ ಚಿತ್ರೀಕರಣಕ್ಕೆ ತೆರಳುವಾಗ ಕೆಲವೊಂದು ರಾಜಕಾರಣಿಗಳ ಸಹಾಯ ಬಯಸಿದ್ದರಂತೆ. ಅದಕ್ಕಾಗಿಯೇ ವಾಟ್ಸಪ್ ಕಾಲ್ ಮೂಲಕ ಮಾತನಾಡಿದ್ದರು. ಬಳಿಕ ಚಾಟ್, ವಾಟ್ಸಪ್ ಕಾಲ್ ಹಿಸ್ಟರಿ ಎಲ್ಲವನ್ನೂ ಡಿಲೀಟ್ ಮಾಡಿದ್ದರು. ಆದ್ರೆ ತನಿಖಾಧಿಕಾರಿಗಳು ಈ ಎಲ್ಲ ಮಾಹಿತಿಯನ್ನು ರಿಟ್ರೀವ್ ಮಾಡೋ ಪ್ರಯತ್ನ ಮಾಡಿದ್ದು, ಸೋಮವಾರ ರಿಪೋರ್ಟ್ ಪೊಲೀಸರ ಕೈ ಸೇರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.