ನವದೆಹಲಿ:- ಪ್ರಧಾನಿಗಳ ಮುಖ್ಯ ಆರ್ಥಿಕ ಸಲಹೆಗಾರ ಹಾಗೂ ಧೀಮಂತ ಆರ್ಥಿಕ ತಜ್ಞ ವಿವೇಕ್ ದೇಬರಾಯ್ ವಿಧಿವಶರಾಗಿದ್ದಾರೆ.69 ವರ್ಷದ ವಿವೇಕ್ ದೇವರಾಯ್ ಕೆಲ ವರ್ಷಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು. ವಿವೇಕ್ ದೇಬ್ರಾಯ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
‘ಡಾ. ಬಿಬೇಕ್ ದೇಬ್ರಾಯ್ ಅವರು ಆರ್ಥಿಕತೆ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆದ್ಯಾತ್ಮ ಮತ್ತಿತರ ವಿಚಾರಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಭಾರತದ ಬೌದ್ಧಿಕ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿ ಹೋಗಿದ್ದಾರೆ. ಸಾರ್ವಜನಿಕ ನೀತಿಗೆ ಕೊಡುಗೆ ನೀಡುವುದರ ಜೊತೆಗೆ, ನಮ್ಮ ಪ್ರಾಚೀನ ಪಠ್ಯಗಳೊಂದಿಗೆ ಕೆಲಸ ಮಾಡಲು ಖುಷಿ ಪಡುತ್ತಿದ್ದರು,’ ಎಂದು ನರೇಂದ್ರ ಮೋದಿ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಪದ್ಮಶ್ರೀ ಮೊದಲಾದ ಹಲವು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿರುವ ವಿವೇಕ್ ದೇಬ್ರಾಯ್ ಅವರು ಮೇಘಾಲಯದಲ್ಲಿ ಜನಿಸಿದರೂ, ಮುಖ್ಯವಾಗಿ ಓದಿದ್ದು ಕೋಲ್ಕತಾದಲ್ಲಿ. ಲಂಡನ್ನ ಕೇಂಬ್ರಿಡ್ನಲ್ಲಿ ಅರ್ಥಶಾಸ್ತ್ರದ ಉನ್ನತ ಶಿಕ್ಷಣ ಪಡೆದಿದ್ದರು.