ಧಾರವಾಡ:- ಅಭಿವೃದ್ಧಿ ಬಗ್ಗೆ ಬಿ ಆರ್ ಪಾಟೀಲ್ ಮತ್ತೆ ಸಿಎಂ ಗೆ ಪತ್ರ ಬರೆದ ವಿಚಾರವಾಗಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ
ಈ ಸಂಬಂಧ ಧಾರವಾಡದಲ್ಲಿ ಮಾತನಾಡಿದ ಅವರು, ಈಗ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಕಲಾಪದ ವೇಳೆ ಅದರ ಬಗ್ಗೆ ಮಾತನಾಡಿದರೆ ಅವಕಾಶ ಕೊಡುತ್ತೇನೆ. ಚರ್ಚೆ ಮಾಡಲು ಅವಕಾಶ ನೀಡುತ್ತೇನೆ. ಅಧಿವೇಶನದ ವೇಳೆ ಯಾವುದಕ್ಕೂ ಸ್ಪಂದಿಸಿಲ್ಲ ಅಂತಾರೆ. ಅದಕ್ಕಾಗಿ ಮಂತ್ರಿಗಳು ಹೆಚ್ಚಿನ ಸಮಯ ಅಧಿವೇಶನದಲ್ಲಿ ಕುಳಿತುಕೊಳ್ಳಬೇಕು
ಜಿಲ್ಲಾ ಪ್ರವಾಸ ಮಾಡಬೇಕು, ಜನರ ಕಷ್ಟಕ್ಕೆ ಸ್ಪಂದಿಸಿ. ಶಾಸಕರು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ತಯಾರಿ ಮಾಡಿಕೊಂಡು ಬರಬೇಕು. ಕಾರ್ಯಕ್ರಮ ಜಾರಿಗೆ ತರುವಂತೆ ಕೆಲಸ ಮಾಡಬೇಕು. ದುರ್ದೈವ ದಿಂದ ಈ ಕೆಲಸ ಬಹಳ ಕಡಿಮೆಯಾಗಿದೆ. ಇದು ಸುಧಾರಣೆ ಆಗಬೇಕು ಎಂದರು.
ಇನ್ನೂ ಉತ್ತರ ಕರ್ನಾಟಕ ಬಗ್ಗೆ ಅಧಿವೇಶನದಲ್ಲಿ ಹೆಚ್ಚು ಚರ್ಚೆ ಮಾಡುವ ವಿಚಾರವಾಗಿ ಮಾತನಾಡಿ, ಡಿಸೆಂಬರ್ 5, 6 ರಂದು ಪ್ರಶ್ನೋತ್ತರ ಬಳಿಕ ಉತ್ತರ ಕರ್ನಾಟಕ ಚರ್ಚೆ ಬಗ್ಗೆ ಸಮಯ ನೀಡುತ್ತೇನೆ. ಯಾರು ಏನು ಬೇಕಾದರೂ ಕೇಳಬಹುದು , ಅದನ್ನ ಅಜೆಂಡಾದಲ್ಲಿ ಹಾಕಿಸಿದ್ದೇನೆ. ಈ ಹಿಂದೆ ಅಧಿವೇಶನದಲ್ಲಿ ಗುರುವಾರ, ಶುಕ್ರವಾರ ಮಾತ್ರ ಚರ್ಚೆ ಇತ್ತು. ಆದ್ರೆ ಆಗ ಸಮಯ ಸಿಗುತ್ತಿರಲಿಲ್ಲ, ಚರ್ಚೆ ಸರಿಯಾಗಿ ಆಗುತ್ತಿರಲಿಲ್ಲ. ರಾಜ್ಯದ ಯಾರೇ ಶಾಸಕರು ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಮಾಡಿದ್ರೆ ಅವರಿಗೆ ಮೊದಲ ಪ್ರಾಶಸ್ತ್ಯ ಕೊಡುತ್ತೇನೆ. ಪಕ್ಷ ಭೇದ ಮರೆತು, ಉತ್ತರ ಕರ್ನಾಟಕ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತೇನೆ. ಸರ್ಕಾರಕ್ಕೆ ಮಾರ್ಗದರ್ಶನ ಕೊಡುವ ಕೆಲಸ ಮಾಡುತ್ತೇನೆ ಎಂದರು.
ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಅಧಿವೇಶಕ್ಕೆ ಭಾಗಿಯಾಗದ ಹಿನ್ನೆಲೆ ಕೆಲವರು ಹೆಚ್ಚಾಗಿ ಅಧಿವೇಶನ ಪ್ರತಿಭಟನೆಗೆ ಮಾತ್ರ ಸೀಮಿತ ಅಂತ ಹೇಳ್ತಾರೆ. ಅದಕ್ಕೆ ಈ ಬಾರಿ ನಾನು ಎಲ್ಲ ಶಾಸಕರಿಗೆ ಪತ್ರ ಬರೆದಿದ್ದೇನೆ. ಕಡ್ಡಾಯವಾಗಿ ಎಲ್ಲರೂ ಅಧಿವೇಶನಕ್ಕೆ ಭಾಗಿಯಾಗಲು ಕೋರಿದ್ದೇನೆ. ಈ ಹಿಂದಿನಂತೆ ನಾವು ಹೆಚ್ಚು ಶಾಸಕರಿಂದ ನಿರೀಕ್ಷೆ ಮಾಡುವ ಹಾಗಿಲ್ಲ. ಶಾಸಕರು ಸಹಿ ಮಾಡಿ ಹೋಗ್ತಾರೆ, ಕೆಲವು ಬಾರಿ ಬರೋದೇ ಇಲ್ಲ. ಇವತ್ತಿನ ರಾಜಕಾರಣದಲ್ಲೀ ಕಮಿಟ್ಮೆಂಟ್ ಇಲ್ಲ. ಎಲ್ಲಾ ಪಕ್ಷದಲ್ಲಿ ಇದೆ ರೀತಿ ಆಗಿದೆ.ಸರ್ಕಾರ ಇರಲಿ ಪ್ರತಿಪಕ್ಷ ಇರಲಿ, ಎಲ್ಲರೂ ಕುಳಿತುಕೊಂಡು ಗಂಭೀರ ಚರ್ಚೆ ಮಾಡಿದ್ರೆ, ಅದರಿಂದ ಫಲಿತಾಂಶ ಬರಲಿದೆ. ಮಾಡಬೇಕೆಂಬ ಭಾವನೆ ಅವರಲ್ಲಿ ಬರಬೇಕು. ನಾನು ವಿನಂತಿ ಮಾಡಿದ್ದೇನೆ. ಬೆಳಗಾವಿ ಅಧಿವೇಶನ ಯಶಸ್ವಿ ಮಾಡಲು ಹೇಳಿದ್ದೇನೆ. ಬಗ್ಗೆ ಸಿಎಂ ಸೇರಿ ನಾಲ್ಕೈದು ಸಚಿವರ ಜೊತೆ ಮಾತನಾಡಿದ್ದೇನೆ. ಪ್ರತಿ ಬಾರಿಗಿಂತ ಈ ಬಾರಿ ಸುಧಾರಣೆ ಆಗುವ ಭರವಸೆ ಇದೆ.ಬೆಳಗಾವಿ ಅಧಿವೇಶನಕ್ಕೆ ಹೆಚ್ಚಿನ ಸಮಯವಕಾಶ ಕೊಡಬೇಕು. ಕನಿಷ್ಠ 20 ರಿಂದ 25 ದಿನ ಅಧಿವೇಶನಕ್ಕೆ ಕೊಡಬೇಕು. ಯಾವ ಸರ್ಕಾರ ಬಂದರೂ 15ಕ್ಕೆ ಮುಕ್ತಾಯ ಮಾಡ್ತಾರೆ. ಅದು ಸರಿಯಲ್ಲ, ಇನೊಂದು ವಾರ ಮುಂದೆ ಅಧಿವೇಶನ ನಡೆಸುವ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಇನ್ನು ಒಂದು ವಾರ ಅಧಿವೇಶನ ಮುಂದೆ ಹೋದ್ರೆ ಸಮಸ್ಯೆ ಪರಿಹಾರ ಆಗುತ್ತವೆ ಎಂದರು.
ಇದೇ ವೇಳೆ ಬೆಳಗಾವಿ ಸುವರ್ಣ ಸೌಧದ ಬಳಿ ಶಾಸಕರ ಭವನ ಕಟ್ಟಿಸುವ ವಿಚಾರವಾಗಿ ಮಾತನಾಡಿ, ಸುವರ್ಣ ಸೌಧದ ರಸ್ತೆ ಪಕ್ಕದಲ್ಲಿ 20ಎಕರೆ ಜಮೀನಿದೆ. ಶಾಸಕರ ಭವನ ಅಲ್ಲಿಯೇ ಮಾಡಬೇಕೆಂದು ಚರ್ಚೆ ನಡೆದಿದೆ. ಶಾಸಕರ ಭವನ ಮಾಡಿದ್ರೆ, ಉಳಿದ ಸಮಯದಲ್ಲಿ ಖಾಲಿ ಬೀಳುತ್ತೆ. ಅದಕ್ಕಾಗಿ ತಾಜ್ ನಂತಹ ದೊಡ್ಡ ಹೋಟೆಲ್ ದವರಿಗೆ ಮಾತನಾಡಿಸಿ ಒಪ್ಪಂದದ ಮೇಲೆ ಕೊಡಬಹುದು. ಶಾಸಕರಿಗಾಗಿ ಅದರಲ್ಲಿ 10ರೂಮ್ ಗಳನ್ನ ಖಾಯಂ ಆಗಿ ಇಡಬೇಕು. ಉಳಿದ ರೂಮ್ ಅವರು ಉಪಯೋಗಿಸಬಹುದು ಎಂದರು.