ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 2 ರೂ. ಕಡಿತಗೊಳಿಸಿದೆ. ಪರಿಷ್ಕೃತ ದರ ಮಾರ್ಚ್ 15 ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ.
ಬೆಲೆ ಇಳಿಕೆಯಿಂದ 58 ಲಕ್ಷ ಸರಕು ವಾಹನ, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಮಹಿಳಾ ದಿನಾಚರಣೆಯಂದು ಕೇಂದ್ರ ಸರ್ಕಾರ ಗೃಹ ಬಳಕೆಯ ಎಲ್ಪಿಜಿ ದರವನ್ನು ಇಳಿಕೆ ಮಾಡಿತ್ತು.
Oil Marketing Companies (OMCs) have informed that they have revised Petrol and Diesel Prices across the country. New prices would be effective from 15th March 2024, 06:00 AM.
Reduction in petrol and diesel prices will boost consumer spending and reduce operating costs for over… pic.twitter.com/FlUSdtg2Vi
— Ministry of Petroleum and Natural Gas #MoPNG (@PetroleumMin) March 14, 2024
ಲಕ್ನೋದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.57 ರೂ.ನಿಂದ 94.65ರೂ.ಗೆ ಇಳಿದಿದೆ. ಆಗ್ರಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.20ರ ರೂ.ನಿಂದ 94.35ರೂ.ಗೆ ಇಳಿದಿದೆ. ಡೀಸೆಲ್ 89.37 ರೂ.ನಿಂದ 87.41 ರೂ.ಗೆ ಇಳಿದಿದೆ. ಮೀರತ್ನಲ್ಲಿ ಪೆಟ್ರೋಲ್ ಬೆಲೆ 96.31 ರೂ.ನಿಂದ 94.43 ರೂ.ಗೆ ಇಳಿದಿದೆ.
ಕೋಲ್ಕತ್ತಾದಲ್ಲಿ ಇಂದು ಪೆಟ್ರೋಲ್ ದರ 106.03ರೂ.ನಿಂದ 103.94 ರೂ.ಗೆ ಇಳಿಕೆಯಾಗಿದ್ದು, ಡೀಸೆಲ್ ದರ ಲೀಟರ್ಗೆ 92.76 ರೂ.ನಿಂದ 90.76 ರೂ.ಗೆ ಇಳಿಕೆ ಕಂಡಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ 106.31ರೂ.ನಿಂದ 104.21ರೂ.ಗೆ ಹಾಗೂ ಡೀಸೆಲ್ ಲೀಟರ್ಗೆ 94.27 ರೂ.ನಿಂದ 92.15 ರೂ.ಗೆ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಇಂದು (ಮಾರ್ಚ್ 14) ಪ್ರತಿ ಲೀಟರ್ ಪೆಟ್ರೋಲ್ ದರ 101.94 ರೂಪಾಯಿ ಹಾಗೂ ಡೀಸೆಲ್ ಬೆಲೆ 87.89 ರೂಪಾಯಿ ಇದ್ದು. ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆಯಾಗಲಿದೆ. ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ರೂಪಾಯಿಗೆ ಇಳಿಕೆ ಆಗಲಿದೆ.