ಬೆಂಗಳೂರು:- ಬಿಜೆಪಿಯಲ್ಲಿ ಬಂಡಾಯ ಪ್ರವೃತ್ತಿ ಶುರುವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಖರ್ಗೆ ಸ್ಪರ್ಧೆ ಕುರಿತು ನಿಶ್ಚಿತವಾಗಿ ಯಾವುದನ್ನೂ ಹೇಳಲಿಲ್ಲ. ಅವರು ಪಕ್ಷದ ಅಧ್ಯಕ್ಷರಾಗಿರುವುದರಿಂದ ದೇಶದೆಲ್ಲೆಡೆ ಸುತ್ತಾಡಬೇಕಾಗುತ್ತದೆ. ಹಾಗಾಗಿ ಅವರಿಗೆ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಕಷ್ಟವಾಗುತ್ತಿರಬಹುದು ಎಂದು ಸತೀಶ್ ಹೇಳಿದರು
ಬಿಜೆಪಿಯ ಹಾಲಿ ಸಂಸದರಲ್ಲಿ 6 ಜನರಿಗೆ ಟಿಕೆಟ್ ನೀಡದಿರುವುದು ಮತ್ತು ಮೂವರು ನಿವೃತ್ತಿ ಘೋಷಿಸಿರುವುದನ್ನು ಕಾಂಗ್ರೆಸ್ ಹೇಗೆ ನೋಡುತ್ತದೆ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಅದು ಅವರ ಪಕ್ಷದ ವಿಚಾರ, ಆದರೆ ಇಂಥ ನಡೆಗಳು ಕೆಲವು ಸಲ ಬ್ಯಾಕ್ ಫೈರ್ ಆಗುವ ಅಪಾಯವಿರುತ್ತದೆ, ರಾಜ್ಯದ ಜನರೆಲ್ಲ ನೋಡುತ್ತಿರುವ ಹಾಗೆ ಶಿಸ್ತಿನ ಪಕ್ಷ ಎಂದು ಹೇಳೊಕೊಳ್ಳುತ್ತಿದ್ದ ಬಿಜೆಪಿಯಲ್ಲಿ ಗೊಂದಲ ಮತ್ತು ಬಂಡಾಯ ಪ್ರವೃತ್ತಿ ಶುರುವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.