ಚಾಮರಾಜನಗರ:- ಲೋಕಸಭಾ ಸಾರ್ವತ್ರಿಕ ಚುನಾ ವಣೆ-2024ರ ಸಂಬಂಧ ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯ ಹನೂರು ವಿಧಾನಸಭಾ ಕ್ಷೇತ್ರದ ಇಂಡಿಗನತ್ತ ಗ್ರಾಮದಲ್ಲಿ ಏ. 29ರಂದು ಮರು ಮತ ದಾನ ನಡೆಯಲಿದೆ.
ಆನೇಕಲ್: ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಬಂಡಿ ಮಹಾಕಾಳಿ ಜಾತ್ರೆ!
ಚುನಾವಣಾ ಆಯೋಗದ ನಿರ್ದೇಶನದಂತೆ ಹನೂರು ವಿಧಾನಸಭಾ ಕ್ಷೇತ್ರದ ಇಂಡಿಗನತ್ತ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 146 ರಲ್ಲಿ 29ರಂದು ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮರು ಮತ ದಾನ ನಡೆಸಲಾಗುತ್ತದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಎಡಿಸಿ ಗೀತಾ ಹುಡೇದ ತಿಳಿಸಿದ್ದಾರೆ.
ಮತದಾನ ಕೇಂದ್ರ ದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಿಲ್ಲಿ ಏಪ್ರಿಲ್ 28 ರ ರಾತ್ರಿಯಿಂದ ಏ. 29ರ ಮಧ್ಯರಾತ್ರಿ 12 ಗಂಟೆಯವರೆಗೆ ಸಿಆರ್ ಪಿಸಿ ಕಲಂ 144 ರನ್ವಯ ಮತಗಟ್ಟೆಯ ಸುತ್ತಲು 100 ಮೀ. ಅಂತರದೊಳಗೆ ಕೆಲ ಷರತ್ತುಗಳನ್ನು ವಿಧಿಸಿ ನಿಷೇದಾಜ್ನೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ.