ಇಂದು ಪ್ರಕಟವಾಗಿರುವ ಐಪಿಎಲ್ 2024 ರ ವೇಳಾಪಟ್ಟಿಯ ಪ್ರಕಾರ ಮೊದಲ ಹಂತದಲ್ಲಿ 4 ಪಂದ್ಯಗಳನ್ನು ಆಡಲಿದೆ.
ಮಾರ್ಚ್ 22 ರಂದು ನಡೆಯಲ್ಲಿರುವ ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ತಂಡ, ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ತಂಡವನ್ನು ತನ್ನ ತವರು ನೆಲವಾದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.
ಮಾರ್ಚ್ 26 ರಂದು ಎರಡನೇ ಪಂದ್ಯವನ್ನಾಡಲಿರುವ ಚೆನ್ನೈ, ಕಳೆದ ಬಾರಿಯ ಫೈನಲ್ ಎದುರಾಳಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಕೂಡ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲ್ಲಿದ್ದು, ಸಂಜೆ 7.30 ಕ್ಕೆ ಆರಂಭವಾಗಲಿದೆ.
ಮಾರ್ಚ್ 31 ರಂದು ಮೂರನೇ ಪಂದ್ಯವನ್ನಾಡಲಿರುವ ಚೆನ್ನೈಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎದುರಾಗಲಿದೆ. ಈ ಪಂದ್ಯಕ್ಕೆ ವೈಜಾಗ್ ಆತಿಥ್ಯವಹಿಸಲಿದ್ದು, ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಮೊದಲ ಕಂತಿನ ಕೊನೆಯ ಪಂದ್ಯವನ್ನು ಚೆನ್ನೈ, ಏಪ್ರಿಲ್ 5 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಹೈದರಾಬಾದ್ನಲ್ಲಿ ನಡೆಯಲ್ಲಿದ್ದು, ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ