ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಗ್ರಾಹಕರ ಸಾಲಗಳ ನಿಯಮಗಳನ್ನು ಬಿಗಿಗೊಳಿಸಿದ ಬೆನ್ನಲ್ಲೇ ಬ್ಯಾಂಕ್ ಮತ್ತು ಎನ್ಬಿಎಫ್ಸಿ ಸಂಸ್ಥೆಗಳ ಷೇರುಗಳು ಭಾರೀ ಮಾರಾಟದ ಒತ್ತಡ ಎದುರಿಸುತ್ತಿದ್ದು, ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಶೇ. 7ರಷ್ಟು ತೀವ್ರ ಕುಸಿತ ಕಂಡಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಶೇ. 3.34ರಷ್ಟು ಕುಸಿತ ಕಂಡರೆ, ಆಕ್ಸಿಸ್ ಬ್ಯಾಂಕ್ ಷೇರುಗಳು ಶೇ. 3ರಷ್ಟು ಇಳಿಕೆ ಕಂಡಿವೆ, ಕೆನರಾ ಬ್ಯಾಂಕ್ ಷೇರುಗಳು ಶೇ. 2.67ರಷ್ಟು ಮತ್ತು ಬ್ಯಾಂಕ್ ಆಫ್ ಬರೋಡಾ ಶೇ. 2.31ರಷ್ಟು ಕುಸಿತ ಕಂಡಿವೆ. ಫೆಡರಲ್ ಬ್ಯಾಂಕ್ ಶೇ 1.39, ಎಚ್ಡಿಎಫ್ಸಿ ಬ್ಯಾಂಕ್ ಶೇ. 1.26, ಐಸಿಐಸಿಐ ಬ್ಯಾಂಕ್ ಶೇ. 1.16 ಮತ್ತು ಇಂಡಸ್ಇಂಡ್ ಬ್ಯಾಂಕ್ ಶೇ 0.89 ಕೂಡ ಬಿಎಸ್ಇಯಲ್ಲಿ ಕುಸಿತ ದಾಖಲಿಸಿವೆ.
ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ ಎಸ್ಬಿಐ ಕಾರ್ಡ್ಸ್ ಆಂಡ್ ಪೇಮೆಂಟ್ ಸರ್ವೀಸಸ್ ಷೇರುಗಳು ಶೇ. 6.70ಯಷ್ಟು ಕುಸಿತ ಕಂಡರೆ, ಉಜ್ಜೀವನ್ ಫೈನಾನ್ಶಿಯಲ್ ಸರ್ವಿಸಸ್ ಶೇ. 5, ಅರ್ಮಾನ್ ಫೈನಾನ್ಶಿಯಲ್ ಸರ್ವಿಸಸ್ ಶೇ. 3.91 ಮತ್ತು ಐಐಎಫ್ಎಲ್ ಫೈನಾನ್ಸ್ ಶೇ. 3.78ರಷ್ಟು ಇಳಿಕೆ ಕಂಡಿವೆ.