ನವದೆಹಲಿ: ಏಕದಿನ ವಿಶ್ವಕಪ್ (World Cup) ಫೈನಲ್ನಲ್ಲಿ ಟೀಂ ಇಂಡಿಯಾ ಸೋತಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡ್ರೆಸ್ಸಿಂಗ್ ರೂಮಿಗೆ ತೆರಳಿ ಆಟಗಾರರಿಗೆ ಧೈರ್ಯ ತುಂಬಿದ್ದರ ಬಗ್ಗೆ ಭಾರತ ತಂಡದ (Team India) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಸಂತಸ ವ್ಯಕ್ತಪಡಿಸಿದ್ದಾರೆ.
ನಾನು ಕೋಚ್ ಆಗಿ ಏಳು ವರ್ಷಗಳ ಕಾಲ ಇದ್ದೆ. ಒಂದು ತಂಡ ಸರಣಿ ಅಥವಾ ಪ್ರಮುಖ ಟೂರ್ನಿ ಸೋತ ಬಳಿಕ ಪರಿಸ್ಥಿತಿ ಹೇಗಿರಲಿದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಈ ಕಾರಣದಿಂದ ಇದು ಅತ್ಯಂತ ಮಹತ್ವದ ವಿಚಾರ ಎಂದು ನನಗೆ ಅನಿಸುತ್ತದೆ
ಸೋತು ಕಂಗೆಟ್ಟಿರುವಾಗ ಅದೊಂದು ವಿಚಿತ್ರ ಛಾಯೆ ಆವರಿಸಿರುತ್ತದೆ. ಇಂತಹ ಸಯಮದಲ್ಲಿ ಡ್ರೆಸ್ಸಿಂಗ್ ರೂಮ್ಗೆ ದೇಶದ ಪ್ರಧಾನಿಯಾದಂತವರು ಭೇಟಿ ನೀಡಿದಾಗ, ಅದು ದೊಡ್ಡ ವಿಚಾರವಾಗುತ್ತದೆ. ಇದು ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ್ದಕ್ಕೆ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಟೀಕಿಸಿದ್ದರು.