ದೆಹಲಿ ಪೊಲೀಸರು ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ FIR ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರ ತಿರುಚಿದ ವಿಡಿಯೋಗೆ ಸಂಬಂಧಿಸಿದಂತೆ, ಐಪಿಸಿಯ ಯು/ಎಸ್ 465 ಮತ್ತು 469, 1860 ಮತ್ತು ಐಟಿ ಆಕ್ಟ್, 2000 ರ ಸೆಕ್ಷನ್ 66 ಸಿ ಮತ್ತು 66 ಇ ಅಡಿಯಲ್ಲಿ ದೆಹಲಿ ಪೊಲೀಸ್ ವಿಶೇಷ ಕೋಶದಲ್ಲಿ FIR ದಾಖಲಿಸಲಾಗಿದೆ.
ಅರೆಬೆತ್ತಲಾಗಿದ್ದ ಮಹಿಳೆಯೊಬ್ಬರ ವೀಡಿಯೋಗೆ ನಟಿ ರಶ್ಮಿಕಾ ಅವರ ಮುಖ ಸೇರಿಸಿ ಡೀಪ್ಫೇಕ್ ವೀಡಿಯೋ ಮಾಡಲಾಗಿತ್ತು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಸೇರಿ ಖ್ಯಾತ ನಟರು ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ದೆಹಲಿ ಮಹಿಳಾ ಆಯೋಗ ಕೂಡ ಕ್ರಮಕೈಗೊಳ್ಳುವಂತೆ ಒತ್ತಾಯಿಸಿತ್ತು.
ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವೀಡಿಯೋ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಕುರಿತು ದೆಹಲಿ ಮಹಿಳಾ ಆಯೋಗವು ಸುಮೊಟೊ ಅರಿವು ತೆಗೆದುಕೊಂಡಿದೆ. ವರದಿಯ ಪ್ರಕಾರ, ನಟಿ ಈ ವಿಷಯದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಆಕೆಯ ಚಿತ್ರವನ್ನು ಅಕ್ರಮವಾಗಿ ಮಾರ್ಫಿಂಗ್ ಮಾಡಲಾಗಿದೆ ಎಂದು ಆಯೋಗ ತಿಳಿಸಿತ್ತು