ಬೆಂಗಳೂರು: ರೇಪ್ ಕೇಸ್, ಮೊಟ್ಟೆ ಹೊಡಿಯೋದು, ಅಪಪ್ರಚಾರ ಮಾಡೋದು ನಿಲ್ಲಿಸಿ ಎಂದು ಶಾಸಕ ಮುನಿರತ್ನ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರೇಪ್ ಕೇಸ್, ಮೊಟ್ಟೆ ಹೊಡಿಯೋದು, ಅಪಪ್ರಚಾರ ಮಾಡೋದು ನಿಲ್ಲಿಸಿ. ಮುನಿರತ್ನ ನಡವಳಿಕೆ ಬಗ್ಗೆ ಹೆಣ್ಣುಮಕ್ಕಳಿಗೆ ಗೊತ್ತಿದೆ. ರಾಜಕೀಯ ಲಾಭಕ್ಕೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮರೆತೂ ಕೂಡ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಬೇಡಿ: ಹಣದ ಸಮಸ್ಯೆ ಎದುರಾಗಬಹುದು..!
ಕೆಟ್ಟವನು ಕೆಟ್ಟವನು ಅಂತ ಪ್ರಚಾರ ಮಾಡಿದ್ರೆ ಲಾಭ ಇಲ್ಲ. ಕ್ಷೇತ್ರದಲ್ಲಿ ಹಲವು ಕೆಲಸಗಳು ಅರ್ಧಕ್ಕೆ ನಿಂತಿವೆ. ಅದರ ಬಗ್ಗೆ ಗಮನಹರಿಸಿ ಎಂದು ಅಪಪ್ರಚಾರ ಮಾಡಿದವರಿಗೆ ಟಾಂಗ್ ಕೊಟ್ಟರು. ಅಲ್ಲದೇ, ನ್ಯಾಯಾಲಯದ ತೀರ್ಪಿಗೆ ನಾನು ಬದ್ಧನಾಗಿರುತ್ತೀನಿ ಎಂದು ಸ್ಪಷ್ಟಪಡಿಸಿದರು.
4 ಬಾರಿ ನನ್ನನ್ನು ಶಾಸಕರನ್ನಾಗಿ ಮಾಡಿದ್ದೀರಿ. ನಿಮ್ಮ ಋಣ ತೀರಿಸೋಕೆ ಆಗಲ್ಲ. ನನ್ನ ಕೊನೆ ಉಸಿರು ಇರೋವರೆಗೂ ಋಣ ತೀರಿಸೋಕೆ ಆಗಲ್ಲ. ಸ್ವಾರ್ಥಕ್ಕೆ, ಅಧಿಕಾರಕ್ಕೆ ಬದುಕಿದರೆ ಭಗವಂತನ ಬಳಿ ಲೆಕ್ಕ ಇರುತ್ತದೆ ಎಂದರು.