ಬೆಂಗಳೂರು: ರಾಮ ಮಂದಿರ ಉದ್ಘಾಟನೆಗೆ ಹೋಗದಿರೋ ಕಾಂಗ್ರೆಸ್ ನಾಯಕರ ನಿರ್ಧಾರ ಇದೀಗ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಕಾಂಗ್ರೆಸ್ ವಿರುದ್ಧ ಸ್ಲೀಪಿಂಗ್ ಸರ್ಕಾರ ಅನ್ನೋ ಪೋಸ್ಟರ್ ಅಭಿಯಾನ ಶುರುಮಾಡಿರೋ ಬಿಜೆಪಿ ನಾಯಕರು ಆರೋಪಗಳ ಸುರಿಮಳೆಯನ್ನೇ ಸುರಿಸ್ತಿದ್ದಾರೆ, ನಾನು ಅಯೋಧ್ಯೆಗೆ ಹೋಗಲ್ಲ ಎನ್ನುತಿದ್ದ ಸಿಎಂ ಸಿದ್ದರಾಮಯ್ಯ ದಿಢೀರ್ ಅಂತ ಯೂಟರ್ನ್ ಹೊಡೆದಿದ್ದಾರೆ. ಈ ಮಧ್ಯೆ ದೊಡ್ಡಗೌಡ್ರು ಸಿದ್ದರಾಮಯ್ಯ ಮೇಲೆ ಸಾಫ್ಟ್ ಕಾರ್ನರ್ ಆಗಿರೋದು ತೀವ್ರ ಕುತೂಹಲ ಕೆರಳಿಸ್ತಿದೆ….
ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಹೋಗದಿರೋ ಹೈಕಮಾಂಡ್ ನಿರ್ಧಾರ ರಾಜಕೀಯವಾಗಿ ತೀವ್ರ ಸ್ವರೂಪ ಪಡೆಯುತ್ತಿದೆ. ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ ಮೇಲೆ ಮುಗಿಬೀಳ್ತಿದ್ದು ಮುಸ್ಲಿಂ ತುಷ್ಠೀಕರಣದ ಪರಮಾವಧಿ ಅಂತ ಕೆಂಡ ಕಾರ್ತಿದ್ದಾರೆ. ಈ ಮಧ್ಯೆ ರಾಜ್ಯ ಬಿಜೆಪಿ ಘಟಕ ಸರ್ಕಾರದ ವಿರುದ್ಧ ಹೊಸ ಫೋಸ್ಟರ್ ಅಭಿಯಾನ ಶುರು ಮಾಡಿದೆ. ಸ್ಲೀಪಿಂಗ್ ಸರ್ಕಾರ ಎಂಬ ಹೆಸರಿನಲ್ಲಿ ರಾಜ್ಯ ನರಳುತ್ತಿದೆ ಸರ್ಕಾರ ನಿದ್ದೆಯಲ್ಲಿದೆ ಎಂದು ಆಕ್ರೋಶ ಹೊರಹಾಕಿದ್ದರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮಲಗಿರುವ ಕಾರ್ಟೂನ್ ಫೋಸ್ಟರ್ ಹಾಕಿ ವ್ಯಂಗ್ಯವಾಡಿದ್ದಾರೆ..
ಕಾಂಗ್ರೆಸ್ ನಾಯಕರ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಶ್ರೀ ರಾಮುಲು
ರಾಮಂದಿರ ಧ್ವಂಸ ಮಾಡಿದ ಬಾಬರ್ ಸಮಾದಿಗೆ ಕೈ ಮುಗಿಯುತ್ತಾರೆ. ಪ್ರಭು ಶ್ರೀರಾಮ ಚಂದ್ರನ್ನ ವಿರೋಧ ಮಾಡುತ್ತಾರೆ ಹಿಂದೂ ವಿರೋಧಿ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಸಿದ್ದರಾಮಯ್ಯ ಒಬ್ಬ ನಾಸ್ತಿಕ, ದೇವಸ್ಥಾನಗಳಿಂದ ದೂರ ಇರ್ತಾರೆ ಅಂತ ಕೆಂಡಕಾರಿದ್ದಾರೆ ರಾಮುಲು….
ಮಾಜಿ ಸಚಿವ ಸಿಟಿ ರವಿ ಸಹ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ ಸಿದ್ದರಾಮಯ್ಯ ಹುಟ್ಟು ಮುಸ್ಲಿಮ್ ಅಲ್ಲ. ಆದ್ರೆ ಟೋಪಿ ಮೇಲಿನ ಪ್ರೀತಿ ಕೇಸರಿ ಮೇಲೆ ಅವರು ತೋರಿಸಲಿಲ್ಲ, ಆರತಿ ತಟ್ಟೆಯಿಂದ ದೃಷ್ಟಿ ತೆಗೆಯುವುದನ್ನೂ ಸಿದ್ದರಾಮಯ್ಯ ನಿರಾಕರಿಸಿದವರು.ಟೋಪಿ ಹಾಕ್ಕೊಂಡು ಸೂಟ್ ಆಗುತ್ತಾ ಇಲ್ವಾ ಅಂತ ನೋಡಿಕೊಂಡಿದ್ದಾರೆ, ಕೆಸರಿ ಪೇಟ ಇಡಲು ಬಂದ್ರೆ ಧಿಕ್ಕರಿಸ್ತಾರೆ. ಸಿದ್ದರಾಮಯ್ಯ ಹುಟ್ಟು ಮುಸ್ಲಿಂ ಆಗದಿದ್ರೂ ಟೋಪಿ ಹಾಕಿದಾಗ ಒರಿಜಿನಲ್ ಮುಸ್ಲಿಂ ಥರ ಕಾಣಿಸ್ತಾರೆ ಅಂತ ವ್ಯಂಗ್ಯವಾಡಿದ್ದಾರೆ….
ಬಿಜೆಪಿ ನಾಯಕರು ತಮ್ಮ ಮೆಲೆ ಹರಿಹಾಯ್ತಿದ್ದಂತೆ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ತಾವು ರಾಮ ಮಂದಿರಕ್ಕೆ ಹೋಗಲ್ಲ ಎಂಬ ಹೇಳಿಕೆಯಿಂದ ಯೂಟರ್ನ್ ಹೊಡೆದಿದ್ದಾರೆ ನಾವು ಶ್ರೀರಾಮಚಂದ್ರನ ಭಕ್ತರು
ಇದನ್ನು ರಾಜಕೀಯ ಮಾಡೋಕೆ ಹೊರಟಿದ್ದಾರೆ.ಶ್ರೀರಾಮಚಂದ್ರನನ್ನ ನಾನು ವಿರೋಧ ಮಾಡಲ್ಲ ನಾನು ಅಯೋಧ್ಯೆಗೆ ಹೋಗುತ್ತೇನೆ, ರಾಮಮಂದಿರ ಉದ್ಘಾಟನೆ ನಂತ್ರ ಭೇಟಿ ನೀಡುತ್ತೇನೆ. ರಾಮಮಂದಿರ ಯಾವ ರೀತಿ ನಿರ್ಮಾಣ ಮಾಡಿದ್ದಾರೆ
ಹೋಗಿ ನೋಡಿ ಬರುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ…
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಪರ ಮಾಜಿ ಪ್ರಧಾನಿ ದೇವೇಗೌಡರು ಬ್ಯಾಟ್ ಬೀಸಿರೋದು ತೀವ್ರ ಕುತೂಹಲ ಕೆರಳಿಸ್ತಿದೆ ಸಿದ್ದರಾಮಯ್ಯ ವೈಯುಕ್ತಿಕವಾಗಿ ದೈವಭಕ್ತ. ಚಾಮುಂಡೇಶ್ವರಿಗೆ ಯಾವಾಗಲೂ ಹೋಗ್ತಾರೆ
ಅವರ ಪತ್ನಿ ಮಹಾನ್ ದೈವಭಕ್ತೆ ಅಂತ ಹೇಳಿ ಸಿದ್ದು ಪರ ಮಾತನಾಡಿದ್ದಾರೆ ದೊಡ್ಡಗೌಡ್ರು…
ಒಟ್ನಲ್ಲಿ ರಾಮ ಮಂದಿರ ಉದ್ಘಾಟನೆ ವಿವಾದ ಕಾಂಗ್ರೆಸ್- ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ವೇದಿಕೆಯಾಗಿದ್ರೆ, ಬಿಜೆಪಿಗೆ ಪ್ರತಿಷ್ಠೆಯಾಗಿದೆ. ಸಿಎಂ ಸಿದ್ದರಾಮಯ್ಯ ಮೇಲೆ ಮುಗಿಬಿದ್ದಿರುವ ಕೇಸರಿನಾಯಕರು ಕೆರಳಿಕೆಂಡವಾಗ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ನಾನು ರಾಮಭಕ್ತ ಅಯೋಧ್ಯೆಗೆ ಹೋಗ್ತೀನಿ ಎಂದಿರೋ ಎಂದಿರೋ ಸಿದ್ದು ನಡೆ ತೀವ್ರ ಕುತೂಹಲ ಕೆರಳಿಸ್ತಿದೆ…..