ಸ್ಯಾಂಡಲ್ವುಡ್ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಇತ್ತೀಚೆಗೆ ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಸಹೋದರನ ನಿಶ್ಚಿತಾರ್ಥದ ಫೋಟೋವನ್ನು ಶೇರ್ ಮಾಡಿರುವ ರಕ್ಷಿತಾ ಪ್ರೇಮ್ ನವ ಜೋಡಿಗೆ ಶುಭ ಹಾರೈಸಿದ್ದಾರೆ.
‘ಏಕ್ ಲವ್ ಯಾ’ ಸಿನಿಮಾ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಣಾ ಇದೀಗ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ರಕ್ಷಿತಾ ಪ್ರೇಮ್ ಮತ್ತು ಕುಟುಂಬಸ್ಥರು ಭಾಗಿಯಾಗಿದ್ದಾರೆ. ಭಾವಿ ಪತ್ನಿ ಜೊತೆಗಿನ ರಾಣಾ ಫೋಟೋ ನೋಡಿ ಅಭಿಮಾನಿಗಳು ನವ ಜೋಡಿಗೆ ಶುಭ ಕೋರಿದ್ದಾರೆ.
ಇನ್ನೂ ರಾಣಾ ಮದುವೆಯಾಗುತ್ತಿರುವ ಹುಡುಗಿ ಯಾರು, ಯಾವ ಊರು ಎಂಬುದು ರಿವೀಲ್ ಆಗಿಲ್ಲ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಮದುವೆ ಯಾವಾಗ, ಎಲ್ಲಿ ಎಂಬುದು ಕುಟುಂಬ ಸದಸ್ಯರು ಮಾಹಿತಿ ನೀಡಿಲ್ಲ.