ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಸಹೋದರ ನಟ ರಾಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿ ಮನೆಯವರ ಒಪ್ಪಿಸಿ ರಕ್ಷಿತಾ ಎಂಬುವರ ಜೊತೆ ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ರಾಣ ಹಾಗೂ ರಕ್ಷಿತಾ ಮದುವೆ ನೆರವೇರಿದೆ. ಮಧ್ಯಾಹ್ನ 12 ಗಂಟೆಗೆ ಮೇಷ ಲಗ್ನದಲ್ಲಿ ರಕ್ಷಿತಾಗೆ ಮಾಂಗಲ್ಯ ಧಾರಣೆ ಮಾಡಿದ್ದು, ಅನೇಕ ಗಣ್ಯರು, ಸೆಲೆಬ್ರಿಟಿಗಳು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ರಕ್ಷಿತಾ ತಮ್ಮ ರಾಣ ಮದುವೆಗೆ ಆಗಮಿಸಿದ ಕಿಚ್ಚ ಸುದೀಪ್, ಉಪೇಂದ್ರ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ರಾಣಾ ಮತ್ತು ರಕ್ಷಿತಾ ಅವರ ಎಂಗೇಜ್ ಮೆಂಟ್ ಕಳೆದ ನವೆಂಬರ್ ತಿಂಗಳಲ್ಲಿಯೇ ನಡೆದಿತ್ತು. ಇದೀಗ ಅದ್ದೂರಿಯಾಗಿ ಮದುವೆ ಸಂಭ್ರಮ ನೆರವೇರಿದೆ.
ಹಿರಿಯ ನಟಿ ಮಮತಾ ರಾವ್ ಪುತ್ರ ರಾಣಾ ನಟ ರಾಣಾ ಮತ್ತು ರಕ್ಷಿತಾ ಜೋಡಿಗೆ ಸ್ಯಾಂಡಲ್ವುಡ್ನ ನಟ-ನಟಿಯರು ಹರಸಿ-ಹಾರೈಸಿದ್ದಾರೆ. ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ದಂಪತಿ ಸಹೋದರನ ಮದುವೆಯನ್ನು ಅದ್ದೂರಿಯಾಗಿ ನಡೆಸಿಕೊಟ್ಟಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಮದುವೆಗೆ ಕಿಚ್ಚ ಸುದೀಪ್ ದಂಪತಿ, ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್ ದಂಪತಿ, ರವಿಶಂಕರ್, ಅನುಪ್ರಭಾಕರ್, ಭಾರತಿ ವಿಷ್ಣುವರ್ಧನ್, ಅಶ್ವಿನಿ ಪುನೀತ್ ರಾಜ್ಕುಮಾರ್, ವಿಜಯೇಂದ್ರ, ಹಿರಿಯ ನಟಿ ಅಂಬಿಕಾ, ನಟಿ ಅಂಜಲಿ, ತಾರಾ ಸೇರಿ ಅನೇಕರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.