ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ತಿಳಿಸಿದ ರಕ್ಷಾ ರಾಮಯ್ಯ ಹಾಗೂ ಕೆ.ವಿ. ಗೌತಮ್

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೌತಮ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು. ಮುಖ್ಯಮಂತ್ರಿಗಳು ರಕ್ಷಾ ರಾಮಯ್ಯ  ಹಾಗೂ ಗೌತಮ್ ಅವರಿಗೆ ಶುಭ ಹಾರೈಸಿದರು. ಹಾಗೆ ಕೆಲವೊಂದು ಸಲಹೆಗಳನ್ನು ಸಹ ನೀಡಿದರು. ಎರಡೂ ಲೋಕಸಭಾ ಕ್ಷೇತ್ರಗಳಲ್ಲೂ ಜನರ ಅಭಿಪ್ರಾಯ, ಒಲವು ಕಾಂಗ್ರೆಸ್ ಪರವಾಗಿದೆ. ಜನರ ನಡುವೆ ನಿಂತು ಕೆಲಸ ಮಾಡಿ ಎಂದು ಸಲಹೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.