8000 ಕಿಲೋಮೀಟರ್ ಯಶ್ (Yash) ಪ್ರಯಾಣ ಯಾರಿಗಾಗಿ? ಯಾಕಾಗಿ? 40 ರಿಂದ 50 ದಿನಗಳ ವೃತ ಆ ಊರಲ್ಲಿ ಯಾರ ಜೊತೆಯಲ್ಲಿ? ಶ್ರೀಲಂಕಾದಲ್ಲಿ ಅದೇನು ಕೆಲಸ ರಾಕಿಂಗ್ ಸ್ಟಾರ್ಗೆ? ಹಗಲು-ರಾತ್ರಿ ಯಶ್ ಹಾಕಿಕೊಂಡಿರುವ ಗುರಿ ಮುಂದು. ಕಳೆದ ಕೆಲ ದಿನಗಳಲ್ಲಿ ರಾಕಿಂಗ್ ಸ್ಟಾರ್ ಎಲ್ಲೆಲ್ಲಿಗೆ ಹೋಗಿ ಬಂದ್ರು? ಯಾರನ್ನ ಭೇಟಿ ಮಾಡಿದ್ರು? ರಾಮಾಚಾರಿಯ ಈ ಶರವೇಗದ ಓಟದ ಹಿಂದಿರುವ ಅಸಲಿ ಕತೆ ಏನು? ಇಲ್ಲಿದೆ ಮಾಹಿತಿ.
ಕೆಜಿಎಫ್ (KGF) ಹಿಟ್ ಆಯ್ತು, ಮತ್ಯಾಕೆ ಸಿನಿಮಾ ಅನೌನ್ಸ್ ಮಾಡ್ತಿಲ್ಲ ಜನ ಕೇಳ್ತಿದ್ದಾರೆ. ನಿರ್ಮಾಪಕರು ಸೂಟ್ ಕೇಸ್ ಹಿಡಿದು ವೆಸ್ಟ್ಎಂಡ್ ಯಶ್ ಆಫೀಸ್ಗೆ ಸುತ್ತಿ ಸುತ್ತಿ ಸುಸ್ತಾಗಿದ್ದಾರೆ. ಯಾವ ಪ್ರಶ್ನೆಗಳನ್ನೂ ಯಶ್ ತಮ್ಮ ಕೋಟೆಯೋಳಗೆ ಬಿಟ್ಟು ಕೊಂಡಿಲ್ಲ ಯಾರ ಸೂಟ್ಕೇಸ್ನಿಂದಲೂ ರಾಕಿಂಗ್ ಸ್ಟಾರ್ ಒಂದು ಕಿಲುಬು ಕಾಸು ಎತ್ತಿಕೊಂಡಿಲ್ಲ. ಕಾರಣ ಮೊದಲು ಕತೆ ರೆಡಿಯಾಗಬೇಕು. ಒಳ್ಳೆಯ ಕತೆಗೆ ಮಾತ್ರ ಗೆಲ್ಲೋ ಯೋಗ್ಯತೆ ಇರೋದು ಅನ್ನೊ ಸತ್ಯದ ಬೆನ್ನು ಬಿದ್ದಿದ್ದಾರೆ. ಈಗ ಎಲ್ಲವೂ ಫೈನಲ್ ಆಗಿದೆ. ಹೊಸ ಹೆಜ್ಜೆಗೆ ಯಶ್ ಮುನ್ನುಡಿ ಬರೆದಾಗಿದೆ.
ಯಶ್ 19 (Yash 19) ಸಿನಿಮಾದ ಫಸ್ಟ್ ಲುಕ್ ರೆಡಿಯಾಗಿ 2-3 ತಿಂಗಳಾಗಿದೆ. ಟೈಟಲ್ ಟೀಸರ್ ರೆಡಿಯಾಗಿ ಬಹಳ ದಿನಗಳಾಗಿವೆ. ಯಶ್ ಅದನ್ನ ಮತ್ತೆ ಮತ್ತೆ ಕಣ್ಣರಳಿಸಿ ನೋಡ್ತಿದ್ದಾರೆ. ಕಾರಣ ಒಂದು ಸಣ್ಣ ತಪ್ಪು ಕೂಡ ತಂಡದ ಕಡೆಯಿಂದ ಆಗಬಾರದು ಅಂತ. ಈಗ ಆಕಾಶ ತಿಳಿಯಾಗಿದೆ ಮುಂದೊಂದು ಮಹಾಮಳೆಗೆ ಬಾನು ಸಜ್ಜಾಗಿದೆ. ಯಶ್ ಸುಮಾರು 25 ದಿನ ಲಂಡನ್ನಲ್ಲಿ ಬೀಡು ಬಿಟ್ಟಿದ್ರು. ವಿದೇಶದಲ್ಲಿರುವ ಹಲವು ಟೆಕ್ನಿಷಿಯನ್ಸ್ ಭೇಟಿ ಮಾಡಿದ್ರು. ಮುಂದಿನ ಸಿನಿಮಾಗೆ ಬೇಕಾಗಿರುವ ಪೂರ್ವ ಭಾವಿ ತಯಾರಿ ಮಾಡಿಕೊಂಡ್ರು. 25 ದಿನದ ಜರ್ನಿಯಲ್ಲಿ ಒಂದು ಫೋಟೋ ಶೇರ್ ಮಾಡಲಿಲ್ಲ. ಒಬ್ಬರ ಹೆಸರು ರಿವಿಲ್ ಮಾಡಲಿಲ್ಲ. ಕಾರಣ ನಾವು ಮಾತಾಡೋದಲ್ಲ ನಮ್ಮ ಸಿನಿಮಾ ಮಾತಾಡ್ಬೇಕು ಅನ್ನೊ ಯಶ್ ನಿಲುವು. ಅಲ್ಲಿಂದ ರಾಕಿಭಾಯ್ ಪಯಣ ಸೀದಾ ಶ್ರೀಲಂಕಾಗೆ.