ಬೆಂಗಳೂರು: ರಾಜ್ಯ ರಾಜಕಾರಣವೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಕೇಳಿ ಬಂದಿದ್ದು, ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಮಟ್ಟಹಾಕಲು ಮತ್ತೊಬ್ಬ ಪ್ರಭಾವಿ ನಾಯಕ ‘ಹನಿಟ್ರ್ಯಾಪ್’ ಬಲೆ ಬೀಸಿರುವ ಗಂಭೀರ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ, ಪೆನ್ಡ್ರೈವ್ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಸ್ಫೋಟಕ ಮಾಹಿತಿ ನೀಡಿದರು.
ಅಧ್ಯಕ್ಷರೇ ನನಗಿರೋ ಮಾಹಿತಿಯಂತೆ ಒಬ್ಬರು, ಇಬ್ಬರೂ ಇಲ್ಲ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದರಲ್ಲಿ ಸಿಲುಕಿದ್ದಾರೆ. 48 ಜನ ಈ ಸಿಡಿನಲ್ಲಿ ಇದ್ದಾರೆ. ಸಾರ್ವಜನಿಕ ಜೀವನದಲ್ಲಿ ಹೀಗಾಗಬಾರದು. ಅವರು ಯಾರೇ ಇರಲಿ ಬಹಿರಂಗ ಆಗಲಿ. ವಾಸ್ತವ ಏನು ಎಂಬುದನ್ನ ಜನರಿಗೆ ಗೊತ್ತಾಗಬೇಕು. ಇದರ ತನಿಖೆಯನ್ನ ಮಾಡಿಸಬೇಕು ಎಂದು ಗೃಹ ಮಂತ್ರಿಗಳಿಗೆ ನಾನು ಒತ್ತಾಯಿಸುತ್ತೇನೆ.
Hyperloop: 30 ನಿಮಿಷಗಳಲ್ಲಿ 300 ಕಿ.ಮೀ ಪ್ರಯಾಣ! ಬುಲೆಟ್ ರೈಲಿಗಿಂದ ಸ್ಪೀಡ್ ಆಗಿ ಚಲಿಸಲಿದೆ ಈ ಟ್ರೈನ್
ಇದರಲ್ಲಿ ಯಾರೆಲ್ಲಾ ಇದ್ದಾರೆ. ಇದರ ಪ್ರೊಡ್ಯೂಸರ್ ಯಾರು. ಎಲ್ಲಾ ತನಿಖೆ ಮೂಲಕ ಹೊರಗೆ ಬರಬೇಕು. ಇದೊಂದು ಪಿಡುಗು, ಸಾರ್ವಜನಿಕವಾಗಿ ಬಹಿರಂಗವಾಗಬೇಕು. ನನ್ನ ಮೇಲೆ ಕೂಡ ಅಟೆಂಪ್ಟ್ ಮಾಡಿದ ಬಗ್ಗೆ ಪುರಾವೆ ಇವೆ. ಎಲ್ಲವನ್ನೂ ಸೇರಿ ನಾನು ದೂರು ನೀಡುತ್ತೇನೆ ಎಂದರು.
ಇನ್ನು ರಾಜಣ್ಣ ಅವರು ಈ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದರ ಹಿಂದಿರುವವರನ್ನು ತನಿಖೆ ಮಾಡಿ ಬಯಲಿಗೆಳೆಯಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ರಾಜಣ್ಣ ಅವರು ಲಿಖಿತ ದೂರು ನೀಡುವುದಾಗಿ ಹೇಳಿದ್ದಾರೆ. ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದು ಸ್ಪಷ್ಟಪಡಿಸಿದರು.