ಗಂಗಾವತಿ: ಮುಂಗಾರು ಸಮಯದಲ್ಲಿ ಸರಿಯಾಗಿ ಮಳೆಯಾಗದೆ ಇರುವುದರಿಂದ ರೈತರು ಸಂಕಷ್ಟ ಎದುರಿಸಿಕೊಂಡು ಭತ್ತ ನಾಟಿ ಮಾಡಿದ್ದಾರೆ. ಆದರೆ, ಕಟಾವು ಸಮಯದಲ್ಲಿಮಳೆರಾಯ ಕಾಣಿಸಿಕೊಂಡು ರೈತರಲ್ಲಿ ಭಯ ಹುಟ್ಟಿಸುತ್ತಿದ್ದಾನೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಹಾಗೂ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯ ನೀರು ಬಳಕೆ ಮಾಡಿಕೊಂಡು ಗಂಗಾವತಿ, ಕಾರಟಗಿ ತಾಲೂಕಿನ ಬಹುಪಾಲು ಹೋಬಳಿಗಳ ರೈತರು ಭತ್ತ ನಾಟಿ ಮಾಡುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಮುಂಗಾರು ಹಂಗಾಮಿಗೆ ರೈತರು ಭತ್ತ ನಾಟಿ ಮಾಡಿದ್ದಾರೆ.
ಭತ್ತದ ನಗರಿ’ ಎಂದೇ ಖ್ಯಾತಿಪಡೆದಿರುವ ಗಂಗಾವತಿ ತಾಲೂಕಿನಲ್ಲಿಮುಂಗಾರು ಹಂಗಾಮಿನಲ್ಲಿ45 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿಭತ್ತ ನಾಟಿ ಮಾಡಿದ್ದಾರೆ. ಇದರಲ್ಲಿ35 ಸಾವಿರ ಹೆಕ್ಟೇರ್ ಪ್ರದೇಶ ತುಂಗಭದ್ರಾ ಅಚ್ಚುಪ್ರದೇಶದಲ್ಲಿದೆ. ಜಲಾಶಯದಿಂದ ಎರಡನೇ ಬೆಳೆಗೆ ನೀರು ದೊರೆಯುವುದಿಲ್ಲಎನ್ನುವ ಕಾರಣಕ್ಕೆ ಕೃಷಿ ಇಲಾಖೆ ಅಧಿಕಾರಿಗಳ ಗುರಿ ಮೀರಿ ಈ ಬಾರಿ ಭತ್ತ ನಾಟಿ ಮಾಡಲಾಗಿದೆ.
ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ನೀಡಲು ಜಲಾಶಯದಲ್ಲಿನೀರು ಇಲ್ಲದೆ ಇರುವುದರಿಂದ ಬೇಸಿಗೆ ಬೆಳೆಗೆ ನೀರು ದೊರೆಯುವುದಿಲ್ಲಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಏರಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿಸೋನಾ ಮಸೂರಿ ಭತ್ತಕ್ಕೆ ಪ್ರತಿ ಕ್ವಿಂಟಲ್ಗೆ 2,250 ರಿಂದ 2,400 ರೂ., ಆರ್ಎನ್ಆರ್ ಸೋನಾ ಭತ್ತಕ್ಕೆ ಪ್ರತಿ ಕ್ವಿಂಟಲ್ಗೆ 2,500 ರಿಂದ 2,750 ರೂ. ನಿಗದಿ ಮಾಡಲಾಗಿದೆ. ಇಂತಹ ಸಮಯದಲ್ಲಿಮಳೆ ಕಾಣಿಸಿಕೊಂಡರೆ ಮಾರುಕಟ್ಟೆಯಲ್ಲಿಬೆಳೆ ಇಳಿಕೆಯಾಗುತ್ತಿದೆ.