ಚಿಕ್ಕಮಗಳೂರು:- ಚಿಕ್ಕಮಗಳೂರಿನ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಬಳಿ ಭದ್ರಾ ನದಿಯಲ್ಲಿ ಹಸು ಕೊಚ್ಚಿ ಹೋದ ಘಟನೆ ಜರುಗಿದೆ.
ಬೆಂಗಳೂರಿನಾದ್ಯಂತ ಫ್ಲೆಕ್ಸ್ ಮತ್ತು ಬ್ಯಾನರ್ ಬ್ಯಾನ್ ಮಾಡಲಾಗಿದೆ: ಪೊಲೀಸ್ ಆಯುಕ್ತ ಬಿ ದಯಾನಂದ್
ಸೇತುವೆ ತುದಿಯಲ್ಲಿದ್ದ ಹಸು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕಳೆದ ವಾರವೂ ಹಸುವೊಂದು ಇದೇ ಸೇತುವೆ ಮೇಲೆ ಕೊಚ್ಚಿ ಹೋಗಿತ್ತು. ಇದೀಗ ಮತ್ತೊಂದು ಹಸು ನೋಡನೋಡುತ್ತಿದ್ದಂತೆ ಕೊಚ್ಚಿ ಹೋಗಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಹೆಬ್ಬಾಳ ಸೇತುವೆ ಮೇಲೆ 5-6 ಅಡಿ ನೀರು ಹರಿಯುತ್ತಿದೆ.
ಮಲಪ್ರಭಾ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊಣ್ಣೂರ ಬಳಿಯ ಹಳೆಯ ಸೇತುವೆ ಮುಳುಗಡೆಯಾಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಬಳಿಯ ಸೇತುವೆ ಮುಳುಗಡೆಯಾಗಿದೆ. ಹುಬ್ಬಳ್ಳಿ-ವಿಜಯಪುರ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆ ಇದಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ
ಇನ್ನೂ ಕ್ಷಣ ಕ್ಷಣಕ್ಕೂ ನೇತ್ರಾವತಿ ನದಿ ನೀರಿನ ಹರಿವು ಏರಿಕೆ ಆಗುತ್ತಿದ್ದು, ಬಂಟ್ವಾಳದ ಮಣಿಹಳ್ಳದ ಕಡವಿನಬಾಗಿಲು ಬಳಿ ಏಳು ಮನೆಗಳು ಜಲಾವೃತಗೊಂಡಿದೆ. ನದಿ ನೆರೆ ನೀರಿನಿಂದ ಮನೆಗಳು ಮುಳುಗಿದೆ. ಅಪಾಯದ ಮಟ್ಟವನ್ನು ಮೀರಿ ನೇತ್ರಾವತಿ ನದಿ ಹರಿಯುತ್ತಿದ್ದು, ಮನೆಗಳು ಕುಸಿಯುವ ಭೀತಿ ಇದೆ.