ಕೋಲಾರ : ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಸಂಸದ ರಾಹುಲ್ ಗಾಂಧಿ, ಮೊದಲು ಮಂಡ್ಯದಲ್ಲಿ ನಂತರ ಕೋಲಾರದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ಕೋಲಾರದ ಸಭೆಯಲ್ಲಿ ’ ಕರ್ನಾಟಕದ ಜನತೆಗೆ ನಮಸ್ಕಾರ, ಖರ್ಗೆಜೀ, ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯಜೀ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೀ ’ ಎಂದು ರಾಹುಲ್ ಗಾಂಧಿ ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ನಿಮಗೆ ಈರುಳ್ಳಿ ಕತ್ತರಿಸಿ ಫ್ರಿಡ್ಜ್ʼನಲ್ಲಿ ಇಡೋ ಅಭ್ಯಾಸವಿದೆಯಾ?! ಇದೆಷ್ಟು ಡೇಂಜರ್ ಗೊತ್ತಾ ?
ಆದರೆ, ರಾಹುಲ್ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದ ಶರತ್ ಬಚ್ಚೇಗೌಡ ಮಾತ್ರ ಯಾರ ಹೆಸರನ್ನು ಹೇಳದೇ ಎಲ್ಲರಿಗೂ ಸ್ವಾಗತ ಎಂದು ರಾಹುಲ್ ಗಾಂಧಿಗೆ ಭಾಷಣ ಮುಂದುವರಿಸಲು ಅನುವು ಮಾಡಿಕೊಟ್ಟರು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚೊಕ್ಕoಡಹಳ್ಳಿ ಗೇಟ್ ನಲ್ಲಿ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ತಮ್ಮ ಹಿಂದಿನ ನೆನಪನ್ನು ಸ್ಮರಿಸಿಕೊಂಡರು. ಇಂದಿರಾ ಗಾಂಧಿ ಜೊತೆ ಕೆಜಿಎಫ್ ಗಣಿಗೆ ಹೋಗಿದ್ದ ವಿಚಾರವನ್ನು ರಾಹುಲ್ ಗಾಂಧಿ ನೆನಪಿಸಿಕೊಂಡರು.