ಬೆಂಗಳೂರು: ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್ ಮೇಲ್ ಮಾಡಿದ ಪ್ರಮುಖ ಆರೋಪಿ ರಾಹುಲ್ ಭಟ್ ಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ. ಇಂದಿಗೆ ರಾಹುಲ್ ಭಟ್ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾಗಿದ್ದು, ನ್ಯಾಯಾಧೀಶರೆದುರು ಹಾಜರಾಗೋ ಮುನ್ನವೇ ಕೊವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ನಿನ್ನೆ ಮೆಡಿಕಲ್ ಟೆಸ್ಟ್ ವೇಳೆ ಕೊವಿಡ್ ಟೆಸ್ಟ್ ಮಾಡಿಸಿದ್ದ ರಾಹುಲ್ ಭಟ್ ಗೆ ಇದೀಗ ಕೊರೊನಾ ಧೃಡಪಟ್ಟಿದ್ದು, ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
