ಹುಬ್ಬಳ್ಳಿ:- ಮುಂದಿನ ತಿಂಗಳಿಂದ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯದ ಜೊತೆಗೆ ರಾಗಿ ಮಾಲ್ಟ್ ಅಥವಾ ಗಂಜಿ ಭಾಗ್ಯ ಯೋಜನೆಯನ್ನು ಪ್ರಕಟಿಸಿರುವ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳಿಗೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ರಾಜ್ಯ ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ.ಆರ್.ಕೆ.ಎಮ್.ವಿ.ಕುಸುಮಾ.ರಾಜ್ಯ ಗೌರವಾಧ್ಯಕ್ಷರಾದ ಎಲ್.ಆಯ್.ಲಕ್ಕಮನವರ.ಶಿಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ ಮೇಟಿ. ಹಾಗೂ ರಾಜ್ಯ ಜಿಲ್ಲೆ ತಾಲೂಕಾ ಹಂತದ ಪದಾಧಿಕಾರಿಗಳು ಸ್ವಾಗತಿಸಿ ಹರ್ಷವ್ಯಕ್ತಪಡಿಸಿದ್ದಾರೆ.
ಸಿರಿಧಾನ್ಯಯುಕ್ತ ಆಹಾರವನ್ನು ವಾರದಲ್ಲಿ ಒಂದೆರಡು ದಿನಗಳಾದರೂ ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕೆಂದು ನಮ್ಮ ಸಂಘವು ಬಹುಬ ದಿನಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದೆವು.ಈಗ ನೂತನ ಸರ್ಕಾರ ಮಕ್ಕಳ ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶ ನಾರಿನಾಂಶ ಸರಳ ಜೀರ್ಣ ಕ್ರಿಯೆ ಹೊಂದಿರುವ ರಾಗಿ ಮಾಲ್ಟ್ ಅತ್ಯಂತ ಅನುಕೂಲಕರವಾಗಿದೆ.ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಸರದಿ ಪ್ರಕಾರ ಎಲ್ಲಾ ಅಹಾರ ಪದಾರ್ಥ ವಿತರಿಸುವ ಯೋಜನೆಯನ್ನೂ ಪ್ರಕಟಿಸಲೆಂದು ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ. ಅಪೇಕ್ಷಿಸಿದ್ದಾರೆ.